ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

ಮಹಿಳಾ ‘ಡಿಎಸ್ಪಿ’ಯ ಕೂದಲು ಹಿಡಿದೆಳೆದು ಹಲ್ಲೆ ನಡೆಸಿದ ವ್ಯಕ್ತಿ..! ಏನಿದು ಘಟನೆ..? ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ..!

ನ್ಯೂಸ್ ನಾಟೌಟ್: ಪ್ರತಿಭಟನಾಕಾರರು ಏಕಾಏಕಿ ಕರ್ತವ್ಯದಲ್ಲಿದ್ದ ಮಹಿಳಾ ಡಿಎಸ್ಪಿ ಮೇಲೆ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯ ಕೂದಲನ್ನು ಎಳೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಬಾಲಮುರುಗನ್(30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇದಲ್ಲದೆ ಪ್ರತಿಭಟನೆಗೆ ಸಂಬಂಧಿಸಿ ಇತರ ನಾಲ್ವರನ್ನು ಕೂಡ ಬಂಧಿಸಲಾಗಿದೆ.
ಕೆಲ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಮುಂದಾದಾಗ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಗಾಯತ್ರಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಅವರನ್ನು ಚದುರಿಸಲು ಯತ್ನಿಸಿದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರಲ್ಲಿ ಒಬ್ಬ ಆಕೆಯ ಕೂದಲನ್ನು ಎಳೆದು ದಾಳಿ ಮಾಡಿದ್ದಾನೆ. ಇತರ ಪೊಲೀಸರು ತಕ್ಷಣ ಡಿಎಸ್ಪಿ ಗಾಯತ್ರಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವೈರಲ್ ವೀಡಿಯೋ ಆಧರಿಸಿ, ಡಿಎಸ್ಪಿಯ ಜುಟ್ಟು ಎಳೆದಾಡುತ್ತಿದ್ದ ಬಾಲಮುರುಗನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೇಳೆ ಡಿಎಸ್ಪಿ ಗಾಯತ್ರಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆ ಕಾಳಿಕುಮಾರ್ ಎಂಬ ವ್ಯಕ್ತಿಯನ್ನು ಸೋಮವಾರ(ಸೆ.2) ಗುಂಪೊಂದು ಹತ್ಯೆಗೈದಿತ್ತು. ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿ ಕಾಳಿಕುಮಾರ್ ಅವರ ಶವವನ್ನು ಇರಿಸಲಾಗಿದ್ದ ಅರುಪುಕ್ಕೊಟ್ಟೈನಲ್ಲಿನ ಸರ್ಕಾರಿ ಆಸ್ಪತ್ರೆಯ ಹೊರಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಪ್ರತಿಭಟನೆ ನಡೆಸಿದ ವೇಳೆ ಈ ಘಟನೆ ನಡೆದಿದೆ.

Click

https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/renuka-swamy-case-darshan-and-gang-final-charge-sheet-summitting-today/
https://newsnotout.com/2024/09/charge-sheet-kannada-news-hariyan-govt-kannada-news-degree-holders/

Related posts

ಮತ್ತೆ ಯೂ ಟರ್ನ್ ಹೊಡೆದ ಸಚಿವ ಎಸ್.ಅಂಗಾರ , ರಾಜಕೀಯ ನಿವೃತ್ತಿ ಹೇಳಿಕೆ ವಾಪಸ್,ಭಾಗೀರಥಿ ಮುರುಳ್ಯರ ಪರ ಪ್ರಚಾರ

ಬಂಟ್ವಾಳ: ಓಮ್ನಿ ಕಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಕಾರು, ಡಿಕ್ಕಿಯ ರಭಸಕ್ಕೆ ಮಗುಚಿಬಿದ್ದ ಓಮ್ನಿ ಕಾರು! ಪ್ರಯಾಣಿಕರು ಗಂಭೀರ

ಶ್ರೀ ಸತ್ಯದೇವತೆ ದೈವದ ದೈವಸ್ಥಾನದ ಮುಂದೆ ಮತ್ತೊಂದು ಪವಾಡ..! ಲಾಕ್ ಮಾಡಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿದ್ದೇಗೆ..?