ದೇಶ-ಪ್ರಪಂಚ

ಮಹಿಳೆಯರ ಶವದ ಮೇಲೆ ತಾಲಿಬಾನಿ ಉಗ್ರರ ಪೈಶಾಚಿಕ ಕೃತ್ಯ..! ಭೀಕರ ಕಥೆ ಬಿಚ್ಚಿಟ್ಟ ಮಹಿಳೆ

ನವದೆಹಲಿ: ತಾಲಿಬಾನ್‌ ಉಗ್ರರು ಅಪ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡು ಮಾಡಬಾರದ ಅನ್ಯಾಯವನ್ನು ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನುವುದನ್ನು ನೋಡದೆ ವಿಕೃತಿ ಮೆರೆಯುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮಹಿಳೆಯರನ್ನು ಕ್ರೂರವಾಗಿ ಗುಂಡಿಟ್ಟು ಕೊಂದು ಅವರ ಶವದ ಜತೆಗೆ ಸೆಕ್ಸ್‌ ಮಾಡುವ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಅನ್ನುವ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಂತಹ ವಿಕೃತಿಯನ್ನು ಸ್ವತಃ ಅಫ್ಘಾನ್ ನಿಂದ ಭಾರತಕ್ಕೆ ಬಂದು ರಕ್ಷಣೆ ಪಡೆದುಕೊಳ್ಳುತ್ತಿರುವ ಮಹಿಳೆಯೊಬ್ಬರು ಬಿಚ್ಚಿಟ್ಟಿದ್ದಾರೆ. ತಾಲಿಬಾನಿಗಳು ಶವಗಳೊಂದಿಗೆ ಸೆಕ್ಸ್ ಮಾಡುತ್ತಾರೆ. ಇದನ್ನು ಅತ್ಯಾಚಾರ ಎಂದೇ ಕರೆಯಬೇಕು. ಕ್ರೂರವಾಗಿ ಹಿಂಸಿಸಿ ಸಾಯಿಸುವುದು ಅಲ್ಲದೇ ಶವದೊಂದಿಗೆ ಸೆಕ್ಸ್ ನಡೆಸಿ ವಿಕೃತ ಆನಂದ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ. ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ತಾಲಿಬಾನಿಗಳು ಮಹಿಳೆಯರನ್ನು ಹೊತ್ತೊಯ್ದು ಗುಂಡಿಕ್ಕಿ ಕೊಂದ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾರೆ. ಹೆಣ್ಣನ್ನು ಭೋಗದ ವಸ್ತು ಎಂದುಕೊಂಡಿದ್ದು ಪ್ರತಿ ಮನೆಯಿಂದ  ಹೆಣ್ಣೊಂದನ್ನು ಹೊತ್ತೊಯ್ಯುತ್ತಾರೆ ಎಂದು ತಿಳಿಸಿದ್ದಾರೆ.

Related posts

ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ..! ಪ್ರಾಣಿಗಳನ್ನು ರಕ್ಷಿಸಿದ ಪೊಲೀಸರು, ಇಲ್ಲಿದೆ ವೈರಲ್ ವಿಡಿಯೋ

ತಂದೆಯ ಮೃತದೇಹದ ಮುಂದೆಯೇ ಪ್ರಿಯತಮೆಯ ಜೊತೆ ವಿವಾಹ! ಇಲ್ಲಿದೆ ಈ ವಿಚಿತ್ರ ಮದುವೆಯ ಸ್ಟೋರಿ!

ಟೀ ಮಾರುತ್ತಿರುವ ಉತ್ತರ ಪ್ರದೇಶ CM ಯೋಗಿ ಆದಿತ್ಯನಾಥ್ ಸಹೋದರಿ..! ಒಂದು ರಾಜ್ಯದ ಮುಖ್ಯಮಂತ್ರಿಯ ಸಹೋದರಿಗೆ ಇದೇನಿದು ಸಂಕಷ್ಟ..?