ಕರಾವಳಿಪುತ್ತೂರು

ಪುತ್ತೂರು:ನವವಿವಾಹಿತೆ ವಿಷ ಕುಡಿದು ಆತ್ಮಹತ್ಯೆ, ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ

280

ನ್ಯೂಸ್ ನಾಟೌಟ್ : ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಿಂದ ವರದಿಯಾಗಿದೆ. ಹರ್ಷಿತಾ(28ವ.) ಮೃತಪಟ್ಟ ಯುವತಿ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ವಿವಾಹ ಸಮಾರಂಭವೇರ್ಪಟ್ಟಿತ್ತು.ಫೆ.೧೦ರಂದು ವಿವಾಹ ನಡೆದಿತ್ತು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಹರ್ಷಿತಾ ವಾಸ್ತವ್ಯವಿದ್ದರು. ಏ.23ರಂದು ತನ್ನ ತಾಯಿ ಮನೆಯ ನೆರೆಮನೆಯಲ್ಲಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಲೆಂದು ಪತಿ ಮನೆಯಿಂದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿ ತಾಯಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಅಲ್ಲಿ ಏ.24 ರಂದು ರಾತ್ರಿ ಸುಮಾರು 11 ಗಂಟೆ ವೇಳೆ ಬಚ್ಚಲು ಮನೆಗೆ ಹೋಗಿ ಬಂದ ಆಕೆ, ತಾನು ಕ್ರಿಮಿನಾಶಕ ವಿಷ ಪದಾರ್ಥವನ್ನು ಸೇವಿಸಿರುವುದಾಗಿ ತಾಯಿಯೊಂದಿಗೆ ಹೇಳಿ ಅಸ್ವಸ್ಥಗೊಂಡಿದ್ದರು.

ಗಾಬರಿಯಾದ ತಾಯಿ, ಮಗ ಮತ್ತು ಸಂಬಂಧಿ ಅಣ್ಣ ಚೆನ್ನಪ್ಪ ಅಂಚನ್‌ರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹರ್ಷಿತಾ ಅವರು ಏ.25ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಗಳು ಹರ್ಷಿತಾ ಮಾನಸಿಕ ಖಿನ್ನತೆಯಿಂದ ಯಾವುದೋ ಕ್ರಿಮಿನಾಶಕ ವಿಷವಿದಾರ್ಥವನ್ನು ಸೇವಿಸಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡುತ್ತಿರುವ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು ಆಕೆಯ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತರ ತಾಯಿ ಯಶೋಧಾ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಪತಿ ದುಬೈಗೆ ಹೋಗಿದ್ದಾನೆಂದು ಹೇಳಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಹನಿಟ್ರ್ಯಾಪ್ ಮಾಡಿದ ಆಂಟಿ..! ಆಂಟಿ ಅಂಡ್‌ ಗ್ಯಾಂಗ್‌ ಗೆ ಸ್ವರ್ಗ ತೋರಿಸಿದ ಪೊಲೀಸರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget