ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ ಎಂದದ್ದೇಕೆ? ಪೊಲೀಸರ ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?

268

ನ್ಯೂಸ್ ನಾಟೌಟ್: ನಮ್ಮ ಮನೆಯ ಸಾಕು ನಾಯಿ ಘಟನೆ ನಡೆದಾಗ ನಾನು ಗುಜರಾತ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದೆನು. ಆಗ ಸಿಸಿಟಿವಿ ವರ್ಕ್‌ ಆಗುತ್ತಿರಲಿಲ್ಲ. ಆದ್ದರಿಂದ ಸಿಸಿಟಿವಿ ಫೂಟೇಜ್‌ ನಮ್ಮ ಬಳಿಯಿಲ್ಲ. ಘಟನೆ ನಡೆದ ನಂತರ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ನಟ ದರ್ಶನ್‌ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ನಟ ದರ್ಶನ್‌ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ನೋಟಿಸ್‌ ನೀಡಿದ ನಂತರ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಹಾಜರಾದ ನಟ ದರ್ಶನ್‌ ಅವರು ಹೇಳಿಕೆ ದಾಖಲಿಸಿದ್ದಾರೆ. ನಮ್ಮ ಮನೆಯ ಸಾಕುನಾಯಿ ಕಚ್ಚಿದ ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಆಗ ನಾನು ಗುಜರಾತಿನನ್ನು ಸಿನಿಮಾ ಶೂಟಿಂಗ್‌ನಲ್ಲಿದ್ದೆನು. ನಮ್ಮ ಹುಡುಗರಿಗೆ ಹೇಳಿದ್ದೆನು. ಸರಿಯಾಗಿ ಮೆಂಟೈನ್ ಮಾಡಿ ಅಂತ ಅವರು ಸರಿಯಾಗಿ ಮೆಂಟೈನ್ ಮಾಡಿಲ್ಲ ಎಂದಿದ್ದಾರೆ.
ಆದರೆ, ಗಾಯಾಳುಗೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೇನೆ ಎನ್ನುವುದಾಗಿ ತನಿಖಾಧಿಕಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರು ಘಟನೆಯ ದಿನದ ಸಿಸಿಟಿವಿ ಪುಟೇಜ್ ಸಹ ಕೇಳಿದ್ದರು. ಆದರೆ, ಘಟನೆಯಾದ ದಿನ ಸಿಸಿಟಿವಿ ವರ್ಕಿಂಗ್ ಇರಲಿಲ್ಲ. ಆರ್. ಆರ್. ನಗರ ನಿವಾಸದಲ್ಲಿ ಹೆಚ್ಚಾಗಿ ನಾನು ಇರೋದಿಲ್ಲ. ಬರ್ತಡೆಯ ಸಂದರ್ಭದಲ್ಲಿ ಮಾತ್ರ ಸಿಸಿಟಿವಿ ಹಾಕಿಸಿರ್ತೀವಿ. ಆದರೆ, ಈಗ ನಾಯಿ ಕಚ್ಚಿದ ಘಟನೆ ನಡೆದ ನಂತರ ಸಿಸಿಟಿವಿ ಅಳವಡಿಸಿದ್ದೇವೆ. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ನಟ ದರ್ಶನ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಕೇವಲ 15 ನಿಮಿಷದಲ್ಲಿ ಹೇಳಿಕೆಯನ್ನು ದಾಖಲಿಸಿದರು ಎಂದು ವರದಿ ತಿಳಿಸಿದೆ
.

See also  ‘ಕಾಂತಾರ’ ಪಂಜುರ್ಲಿ ವೇಷ ಧರಿಸಿದ ಆರ್.ಸಿ.ಬಿ ಅಭಿಮಾನಿ! ತುಳುವರಿಂದ ತೀವ್ರ ಆಕ್ರೋಶ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget