ಕ್ರೈಂಬೆಂಗಳೂರುವೈರಲ್ ನ್ಯೂಸ್

6 ವರ್ಷ ದೈಹಿಕ ಸಂಪರ್ಕ ಹೊಂದಿ ಬಳಿಕ ಅತ್ಯಾಚಾರ ಎಸಗಿದ್ದಾರೆ ಎಂದದ್ದೇಕೆ ಆಕೆ? ಹೈಕೋರ್ಟ್‌ ಮಹಿಳೆಗೆ ಛೀಮಾರಿ ಹಾಕಿದ್ದೇಕೆ? ಏನಿದು ಪ್ರಕರಣ?

ನ್ಯೂಸ್ ನಾಟೌಟ್: ಆರು ವರ್ಷಗಳ ಕಾಲ ಒಪ್ಪಿತ ಲೈಂಗಿಕ ಸಂಬಂಧ ಹೊಂದಿ, ಬಳಿಕ ಆತ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ಎರಡು ಕ್ರಿಮಿನಲ್‌ ಪ್ರಕರಣಗಳನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಪ್ರಕರಣ ರದ್ದು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಬೆಂಗಳೂರಿನ ಇಂದಿರಾನಗರ ಪೊಲೀಸ್‌ ಠಾಣೆ ಹಾಗೂ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ2021ರಲ್ಲಿ ಹೂಡಿದ್ದ ಎರಡು ಪ್ರಕರಣಗಳನ್ನು ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ” ಫೇಸ್‌ಬುಕ್‌ ಮೂಲಕ ಪರಿಚಿತರಾದ ಅರ್ಜಿದಾರರು ಮತ್ತು ದೂರುದಾರರು ಒಂದಲ್ಲ, ಎರಡಲ್ಲ, ಆರು ವರ್ಷ ದೈಹಿಕ ಸಂಬಂಧ ಹೊಂದಿದ್ದಾರೆ. ಒಬ್ಬರ ನಡುವೆ ಸಂಬಂಧ ಹಳಸಿದ ನಂತರ 2019ರಲ್ಲಿಅತ್ಯಾಚಾರ ಆರೋಪ ಮಾಡಲಾಗಿದೆ. ಯಾವುದೇ ಸಾಕ್ಷ್ಯಗಳಿಲ್ಲದೆ ಈ ರೀತಿ ಸುಮ್ಮನೆ ಅತ್ಯಾಚಾರ ಆರೋಪ ಮಾಡುವುದು ಸರಿಯಲ್ಲ. ಇದು ಕಾನೂನಿನ ದುರುಪಯೋಗಕ್ಕೆ ತಾಜಾ ಉದಾಹರಣೆಯಾಗಿದೆ,” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

2013ರಲ್ಲಿಅರ್ಜಿದಾರರು ಮತ್ತು ದೂರುದಾರರು ಫೇಸ್‌ಬುಕ್‌ ಮೂಲಕ ಪರಿಚಿತರಾಗಿದ್ದಾರೆ. ಒಂದೇ ಪ್ರದೇಶದಲ್ಲಿ ನೆಲೆಸಿದ್ದ ಅವರು ಆಗಾಗ್ಗೆ ಪರಸ್ಪರ ಭೇಟಿ ಮಾಡುತ್ತಿದ್ದರು. ಹಾಗೆಯೇ, ಸ್ನೇಹ ಸಂಬಂಧ ಬೆಳೆದು ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರು. ಆದರೆ, ಆ ವ್ಯಕ್ತಿ ಮದುವೆಯಾಗುವುದಾಗಿ ನೀಡಿದ್ದ ಭರವಸೆಯನ್ನು ಪಾಲಿಸದ ಹಿನ್ನೆಲೆಯಲ್ಲಿ ಮಹಿಳೆ ಅತ್ಯಾಚಾರವೆಸಗಿದ್ದಾನೆ ಎಂದು ಇಂದಿರಾನಗರ ಠಾಣೆಯಲ್ಲಿ2021ರ ಮಾ.8ರಂದು ದೂರು ನೀಡಿದ್ದಾರೆ.

ಜಾಮೀನಿನ ಮೇಲೆ ಹೊರಬಂದ ಬಳಿಕ ದಾವಣಗೆರೆಯಲ್ಲಿ ನೆಲೆಸಿರುವ ಬಗ್ಗೆ ಅರಿತ ಮಹಿಳೆ ಅಲ್ಲಿಗೆ ತೆರಳಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಆ ವ್ಯಕ್ತಿ ಮತ್ತು ಮತ್ತೊಬ್ಬ ಮಹಿಳೆಯ ಮೇಲೆ ಮತ್ತೊಂದು ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದರು. ಪೊಲೀಸರು ಎರಡೂ ಪ್ರಕರಣಗಳಲ್ಲೂ ಆರೋಪಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರು ಎರಡೂ ಪ್ರಕರಣ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.

Related posts

ಮೈ ಮುಟ್ಟಿ ಗಗನಸಖಿಗೆ ನಿನ್ನ ರೇಟ್‌ ಎಷ್ಟು ಎಂದು ಕೇಳಿದ ವಿದೇಶಿ ಪ್ರಜೆ? 100 ಡಾಲರ್‌ ಕೊಟ್ರೆ ಬರ್ತಿಯಾ ಎಂದು ಕೇಳಿದವನಿಗಾದ ಗತಿಯೇನು?

ಅಮೆರಿಕದಿಂದ ವೈಮಾನಿಕ ದಾಳಿ..!ಕೆಂಪು ಸಮುದ್ರದಲ್ಲಿ ನಡೆದ ಕಾಳಗದ ಸಂಪೂರ್ಣ ಮಾಹಿತಿ ಇಲ್ಲಿದೆ

ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!