ಕರಾವಳಿ

ಯುವಕನ ಬೆತ್ತಲೆ ಮಾಡಿ ಬ್ಲ್ಯಾಕ್ ಮೈಲ್ ಮಾಡಿದ ಮಹಿಳೆ

264
Spread the love

ನ್ಯೂಸ್ ನಾಟೌಟ್: ಮಹಿಳೆಯೋರ್ವಳು ಉಡುಪಿ ಮೂಲದ ಯುವಕನೊಬ್ಬನ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯಲ್ಲಿ ನೆಲೆಸಿರುವ ಉಡುಪಿ ಮೂಲದ ಅಶೋಕ್ ಶೆಟ್ಟಿ ಅವರು ಕೆಲ ದಿನಗಳ ಹಿಂದೆ ಲೂಡೋ ಆಪ್‌ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಸ್ವಲ್ಪ ದಿನಗಳ ಬಳಿಕ ಮಹಿಳೆಯೋರ್ವಳು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದಳು. ಬಳಿಕ ಅಶೋಕ್ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ 25, 000 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಳು. ಆದರೆ ಅಶೋಕ್ ಆಕೆಯ ಬೇಡಿಕೆಯನ್ನು ತಿರಸ್ಕರಿಸಿದಾಗ ಆಕೆ ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾಳೆ.

ಸಂತ್ರಸ್ತ ಅಶೋಕ್‌ ಈ ಸಂಬಂಧ ಬಾಗಲಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

See also  ಸುಳ್ಯ: ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿ, ಪರಿವಾರಕಾನದಲ್ಲಿ ಆಗಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget