ನ್ಯೂಸ್ ನಾಟೌಟ್: ಮಹಿಳೆಯೊಬ್ಬಳು ಸೋದರಳಿಯನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಸಾದ್ ನ ಲಕ್ಷ್ಮಣಖೇಡಾ ಗ್ರಾಮದಲ್ಲಿ ಮೇ 10ರಂದು ಕೊಲೆ ನಡೆದಿದ್ದು, ಪೊಲೀಸರು ಪ್ರಕರಣ ಭೇದಿಸಿದ್ದಾರೆ.
ಪೊಲೀಸರು ಆತನ ಪತ್ನಿ ಮತ್ತು ಸೋದರಳಿಯನನ್ನು ಬಂಧಿಸಿದ್ದಾರೆ. ಹೆಂಡತಿ ಮತ್ತು ಸೋದರಳಿಯ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧ ಪತಿಗೆ ತಿಳಿದುಬಿಟ್ಟಿತ್ತು, ತಮ್ಮ ದಾರಿಗೆ ಮುಳ್ಳಾದರೆ ಎನ್ನುವ ಭಯದಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದಿದ್ದಾಳೆ ಎನ್ನಲಾಗಿದೆ.
ಸೋದರಳಿಯನನ್ನು ಆಕೆ ಪ್ರೀತಿಸುತ್ತಿದ್ದಳು. ಕೊಲೆ ಮಾಡಿ ಆ ಕೊಲೆಯನ್ನು ಪಕ್ಕದ ಮನೆಯವನ ಮೇಲೆ ದೂರು ಹಾಕಿದ್ದರು. ಪತಿಯ ಕೊಲೆಗಾಗಿ ಇಬ್ಬರು ಅಮಾಯಕರನ್ನು ಜೈಲಿಗೆ ಕಳುಹಿಸಿದ್ದಳು. ಪತಿಯ ಕೊಲೆಯ ನಂತರ, ಪತ್ನಿ ನೆರೆಯ ತಂದೆ ಮತ್ತು ಮಗನ ಮೇಲೆ ಆರೋಪ ಹೊರಿಸಿ ಗಲಾಟೆ ಮಾಡಿದ್ದಳು.
ಆಕೆಗೆ ಬೆಂಬಲವಾಗಿ ಗ್ರಾಮಸ್ಥರು ಮತ್ತು ಪಕ್ಷದ ಸದಸ್ಯರು ಕೂಡ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಆದರೆ, ತನಿಖೆಯ ಬಳಿಕ ಸತ್ಯ ಬಯಲಾಗಿದೆ. ಈಗ ಪೊಲೀಸರು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಮತ್ತು ಅಮಾಯಕ ತಂದೆ ಮತ್ತು ಮಗನನ್ನು ಜೈಲಿನಿಂದ ಬಿಡುಗಡೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಕಾನ್ಪುರದ ಘಟಂಪುರದಲ್ಲಿ ವಾಸಿಸುತ್ತಿದ್ದ ಟ್ರ್ಯಾಕ್ಟರ್ ಮಾಲೀಕ ಧೀರೇಂದ್ರ ಅವರನ್ನು ಮೇ 10 ರಂದು ಅವರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಯಾವುದೋ ಗಟ್ಟಿಯಾದ ವಸ್ತುವಿನಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಕೋರ್ಟ್ ಹಾಲ್ ನಲ್ಲಿ ದರ್ಶನ್ ಕೈ ಹಿಡಿದ ಪವಿತ್ರಾ..! ದರ್ಶನ್ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ..!