Latestಕ್ರೈಂರಾಜಕೀಯರಾಜ್ಯ

ನಾನು ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ಹೇಳಿದ್ದ ಮಹಿಳೆ ಅರೆಸ್ಟ್..​! ಫೋಟೋ ಎಡಿಟ್ ಮಾಡಲಾಗಿದೆ ಎಂದ ಡಿಕೆ ಸುರೇಶ್ ಪರ ವಕೀಲ..!

899

ನ್ಯೂಸ್ ನಾಟೌಟ್: ಮಾಜಿ ಸಂಸದ ಡಿಕೆ ಸುರೇಶ್​ ಪತ್ನಿ ಎಂದು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಇದೀಗ ರಾಮನಗರ ಸೆನ್ ಠಾಣೆಯಲ್ಲಿ ಎಫ್ ಐಆರ್​​ ದಾಖಲಾಗಿದೆ. ​ಡಿ.ಕೆ.ಸುರೇಶ್ ಪರ ವಕೀಲ ಪ್ರದೀಪ್​​ರಿಂದ ದೂರು ಹಿನ್ನೆಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ಮಹಿಳೆ ಪವಿತ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಕೆ ಸುರೇಶ್ ಫೋಟೋದೊಂದಿಗೆ ಮಹಿಳೆ ತನ್ನ ಫೋಟೋವನ್ನು ಎಡಿಟ್ ಮಾಡಿ ಏ.8 ರಂದು ಫೇಸ್ ಬುಕ್, ಇನ್ ​ಸ್ಟಾಗ್ರಾಮ್ ​ನಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಈ ಸಂಬಂಧ ಡಿ.ಕೆ.ಸುರೇಶ್ ವಿರುದ್ಧ ದುರುದ್ದೇಶದಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಕೀಲ ಪ್ರದೀಪ್​​ ದೂರು ನೀಡಿದ್ದರು.

ಮಹಿಳೆ ಡಿಕೆ ಸುರೇಶ್ ರವರ ಪತ್ನಿ ಎಂಬ ಸೋಗಿನಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ಹಬ್ಬಿಸುತ್ತಿದ್ದಾರೆ. ಸುಳ್ಳು ಮಾಹಿತಿಯನ್ನು ನಿಜವೆಂದು ಸಾರ್ವಜನಿಕರು ನಂಬುವಂತೆ ಕೇಡು ಬಯಸುವ ದುರುದ್ದೇಶದಿಂದ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಮಹಿಳೆ ವಿರುದ್ಧ ಕಲಂ 319, 237, 336, 353 ಬಿ.ಎನ್.ಎಸ್ ಹಾಗೂ 66(ಡಿ) ಐ.ಟಿ ಆಕ್ಟ್ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಕೀಲ ಪ್ರದೀಪ್​​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಪಾಕಿಸ್ತಾನದಲ್ಲಿ ಭೂಕಂಪ..! ಎರಡು ದಿನಗಳ ಅಂತರದಲ್ಲಿ 2 ಬಾರಿ ಭೂಕಂಪನ..!

‘ನಾನು ಡಿಕೆ ಸುರೇಶ್ ಪತ್ನಿ..’ ಎಂದು ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್.ಐ.ಆರ್..! ದೂರಿನಲ್ಲೇನಿದೆ..?

See also  ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಲವು ಶಾಸಕರು ಗೈರು! ಅಸಮಾಧಾನದಕ್ಕೆ ಕಾರಣವೇನು? ಯಾರೆಲ್ಲ ಗೈರು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget