ಕ್ರೈಂವೈರಲ್ ನ್ಯೂಸ್

ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದೇಕೆ ಊರವರು? ಯಾರೀಕೆ? ಏನಿದು ಘಟನೆ?

ನ್ಯೂಸ್ ನಾಟೌಟ್: ಹನಿಟ್ರ್ಯಾಪ್ ಮಾಡುತ್ತಿರುವ ಆರೋಪ ಹೊರಿಸಿ ಮಹಿಳೆಯೊಬ್ಬಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಬೆಳಗಾವಿಯ ಗೋಕಾಕ್‌ನ ಘಟಪ್ರಭಾದಲ್ಲಿ ನಡೆದಿದೆ

ಮಹಿಳೆ ವಿರುದ್ಧ ಹನಿಟ್ರ‍್ಯಾಪ್ ಹಾಗೂ ಬ್ಲಾಕ್‌ಮೇಲ್ ಆರೋಪವನ್ನು ನಗರದ ಮಹಿಳೆಯರು ಹಾಗೂ ಸ್ಥಳೀಯರು ಮಾಡಿದ್ದಾರೆ. ಇದೇ ಕಾರಣಕ್ಕೆ ನಗರದ ಮೃತ್ಯುಂಜಯ ಸರ್ಕಲ್‌ನಲ್ಲಿ ಮಹಿಳೆ ಮೇಲೆ ಈ ರೀತಿಯಾಗಿ ವರ್ತಿಸಿದ್ದಾರೆ.

ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿರುವ ವಿಚಾರವಾಗಿ ಈ ಹಿಂದೆ ಸಹ ಗಲಾಟೆಯಾಗಿತ್ತು ಎನ್ನಲಾಗಿದೆ.

ಆಗಾಗ ಊರಿನವರು ಹಾಗೂ ಮಹಿಳೆಯ ನಡುವೆ ಗಲಾಟೆ ನಡೆಯುತ್ತಿತ್ತು. ಮಹಿಳೆ ಹನಿಟ್ರ್ಯಾಪ್ ಮಾಡುತ್ತಿರುವ ಬಗ್ಗೆ ಕೆಲವು ದಿನಗಳ ಹಿಂದೆ ಎಸ್‌ ಪಿಗೂ ಮನವಿ ಮಾಡಲಾಗಿತ್ತು. ಆದರೂ ಮಹಿಳೆಯೊಂದಿಗೆ ಗಲಾಟೆ ಮುಂದುವರೆದಿದ್ದು ಸ್ಥಳೀಯರು ಈ ರೀತಿ ನಡೆದುಕೊಂಡಿದ್ದಾರೆ. ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Related posts

ಪುಸ್ತಕ ಮಾರುತ್ತಾ ಬಂದ ಬಾಲಕ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿ..! 8 ವರ್ಷದ ಬಾಲಕನ ಬಗ್ಗೆ ನಟಿ ಹೇಳಿದ್ದೇನು..?

ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?

ಸುಳ್ಯ: ಮರದಿಂದ ಬಿದ್ದು ವ್ಯಕ್ತಿಯ ದಾರುಣ ಸಾವು..! ಕೊಡಗಿನಿಂದ ಸಂಬಂಧಿಕರ ಮನೆಗೆ ಬಂದಿದ್ದವನ ದುರಂತ ಅಂತ್ಯ..!