ಕ್ರೈಂವೈರಲ್ ನ್ಯೂಸ್

ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಕೊಂದು ಮರಕ್ಕೆ ನೇತು ಹಾಕಿದ ಮಹಿಳೆ..! ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವೇನು..?

261

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬನನ್ನು ಹತ್ಯೆಗೈದು, ಆತನ ಮೃತದೇಹವನ್ನು ಮರಕ್ಕೆ ನೇತು ಹಾಕಿದ ಆರೋಪದಲ್ಲಿ ಓರ್ವ ಮಹಿಳೆ, ಆಕೆಯ ಸಹೋದರ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಪುತ್ರಿಯರನ್ನು ಸೂರಜ್ ಪುರ್ ಪೊಲೀಸರು ರಾಯ್ಪುರದಲ್ಲಿ ಬಂಧಿಸಿದ್ದಾರೆ. ನನ್ನ ಅಪ್ರಾಪ್ತ ಪುತ್ರಿಯರಿಗೆ ಮೃತ ವ್ಯಕ್ತಿಯು ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಾಗೂ ಮೇ 1ರಂದು ನನ್ನ ಅಪ್ರಾಪ್ತ ಪುತ್ರಿಯರ ಪೈಕಿ ಓರ್ವ ಪುತ್ರಿಯನ್ನು ಬಲವಂತವಾಗಿ ಖಾಲಿ ಮನೆಯೊಂದಕ್ಕೆ ಎಳೆದೊಯ್ಯುವಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಕುಟುಂಬವು ತನ್ನ ರಕ್ಷಣೆಗಾಗಿ ಆತನನ್ನು ಹತ್ಯೆಗೈಯ್ದಿತು ಎಂದು ಆರೋಪಿ ಮಹಿಳೆಯು ಹೇಳಿಕೆ ನೀಡಿದ್ದಾಳೆ. ಈ ಘಟನೆಯು ಪ್ರತಾಪ್ ಪುರ್ ಪ್ರಾಂತ್ಯದಲ್ಲಿ ಜರುಗಿದ್ದು, ಮೃತ ದೇಹವು ಮರದಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಉಸಿರುಗಟ್ಟಿಸಿ ಮತ್ತು ಥಳಿಸಿರುವುದರಿಂದ ಮರಣ ಸಂಭವಿಸಿದೆ ಎಂಬ ಸಂಗತಿ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ. ಈ ಸಂಬಂಧ ಹತ್ಯೆಯ ಪ್ರಕರಣ ದಾಖಲಾಗಿದ್ದು, ಭಾಗ್ಮನ್ ಕೋರ್ವಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ನಿವಾಸದ ಬಳಿಯೇ ಮೃತದೇಹವು ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ತಾನು ತನ್ನ ಸಹೋದರ ಖೀರು (50) ಹಾಗೂ ತನ್ನ 14 ಮತ್ತು 16 ವರ್ಷದ ಅಪ್ರಾಪ್ತ ಪುತ್ರಿಯರು ಸೇರಿಕೊಂಡು ಸಂಜಯ್ (35) ಎಂಬ ವ್ಯಕ್ತಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಮಹಿಳೆಯು ತಪ್ಪೊಪ್ಪಿಕೊಂಡಿದ್ದಾಳೆ. ಸಂಜಯ್ ತನ್ನ ಪುತ್ರಿಯರನ್ನು ಯಾವಾಗಲೂ ಬೆದರಿಸುತ್ತಿದ್ದ ಹಾಗೂ ಆತ ಕಳೆದ ಐದು ವರ್ಷಗಳಿಂದ ತನ್ನ ನಿವಾಸದ ಬಳಿಯೇ ವಾಸಿಸುತ್ತಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಮದ್ಯವ್ಯಸನಿಯಾಗಿದ್ದ. ಆತ ಕ್ಷುಲ್ಲಕ ವಿಚಾರಗಳಿಗೆ ಆರೋಪಿ ಮಹಿಳೆಯ ಕುಟುಂಬದೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದ ಎಂದು ಹೇಳಲಾಗಿದೆ. ಮೇ 1ರ ರಾತ್ರಿ ಎಲ್ಲರೂ ಮಲಗಿದ್ದಾಗ, ಅಪ್ರಾಪ್ತ ಬಾಲಕಿಯರ ಕಿರುಚಾಟ ಕೇಳಿ ಎಲ್ಲರೂ ಅವರತ್ತ ಧಾವಿಸಿದ್ದಾರೆ. ಮನೆಯಿಂದ ಹೊರಗೆ ಬಂದಾಗ, ಸಂಜಯ್ ಬಾಲಕಿಯೊಬ್ಬಳನ್ನು ತನ್ನ ಮನೆಗೆ ಎಳೆದೊಯ್ಯುತ್ತಿರುವುದು ಕಂಡು ಬಂದಿದೆ. ಆತನ ಕೃತ್ಯದಿಂದ ಕುಪಿತಗೊಂಡಿರುವ ಮಹಿಳೆ ಹಾಗೂ ಇನ್ನಿತರರು ಆತನನ್ನು ಥಳಿಸಿ, ಹಗ್ಗದಿಂದ ಕುತ್ತಿಗೆ ಬಿಗಿದಿದ್ದಾರೆ. ಆತನ ಮೃತದೇಹವನ್ನು ಶೌಚಾಲಯವೊಂದರಲ್ಲಿ ಎಸೆದಿರುವ ಅವರು, ನಂತರ ಆತ್ಮಹತ್ಯೆಯಂತೆ ಕಂಡು ಬರಲೆಂದು ಆತನ ಮೃತ ದೇಹವನ್ನು ಮರಕ್ಕೆ ನೇತು ಹಾಕಿದ್ದಾರೆ ಎನ್ನಲಾಗಿದೆ.

See also  ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ನಲ್ಲಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು..! ಪ್ರತಿಭಟಿಸಿದ ಪೋಷಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget