ಕರಾವಳಿಕೊಡಗು

ವ್ಯಕ್ತಿಯ ಕನ್ನಡಕವನ್ನೇ ಕಿತ್ತುಕೊಂಡು ತಾನೂ ಧರಿಸಿದ ಕೋತಿ ,ಮಹಿಳೆ ಚಷ್ಮಾ ಹಿಂಪಡೆದ ಶೈಲಿಯೇ ರೋಚಕ!:ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಕಪಿಚೇಷ್ಟೆ ಎಂದು ಹೇಳುವುದಕ್ಕೂ ಅವುಗಳು ನಡೆದುಕೊಳ್ಳುವ ರೀತಿಗೂ ಹೊಂದಾಣಿಕೆಯಿದೆ ಎಂಬಂತೆ ಇಲ್ಲೊಂದು ಕೋತಿ ವ್ಯಕ್ತಿಯೊಬ್ಬರ ಕನ್ನಡಕವನ್ನು ಕಿತ್ತುಕೊಂಡು ಹೋಗಿರುವ ಪ್ರಸಂಗ ನಡೆದಿದೆ.ಕನ್ನಡಕವನ್ನು ಕಳೆದು ಕೊಂಡು ಪರದಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಮಹಿಳೆ ಕೂಡಲೇ ಅತ್ತ ಧಾವಿಸಿ ನಾಜೂಕಿನಿಂದ ಕನ್ನಡಕವನ್ನು ಮರಳಿ ಪಡೆದಿದ್ದಾರೆ.

https://www.instagram.com/reel/CsYf-1ILS-g/?utm_source=ig_web_copy_link&igshid=MzRlODBiNWFlZA==

ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಸಕತ್ ವೈರಲ್ ಆಗಿದ್ದು, ವೀಡಿಯೋದಲ್ಲಿ ಕನ್ನಡಕಧಾರಿ ವ್ಯಕ್ತಿಯೊಬ್ಬರು ಮೆಟ್ಟಿಲು ಹತ್ತಿಕೊಂಡು ಬರುತ್ತಿದ್ದರು. ಈ ವೇಳೆ ಸಮೀಪದಲ್ಲೇ ಕಾದು ಕುಳಿತುಕೊಂಡಿದ್ದ ಕೋತಿಯೊಂದು ದಿಢೀರನೆ ವ್ಯಕ್ತಿಯ ಕನ್ನಡಕವನ್ನು ಕಿತ್ತುಕೊಂಡು ಮೆಟ್ಟಿಲ ಆವರಣದ ಒಂದು ಮೂಲೆಯಲ್ಲಿ ಹೋಗಿ ಕುಳಿತುಕೊಂಡು ಬಿಟ್ಟಿತ್ತು.ಕನ್ನಡಕ ಹಿಡಿದುಕೊಂಡ ಕೋತಿ ತಾನು ಒಂದೆರಡು ಬಾರಿ ಹಾಕಿಕೊಳ್ಳಲು ಪ್ರಯತ್ನ ಪಟ್ಟಿತ್ತು. ಕೂಡಲೇ ಮಹಿಳೆಯೊಬ್ಬರು ಆಗಮಿಸಿ, ಕೋತಿಗೆ ತಿನ್ನಲು ಹಣ್ಣುಗಳನ್ನು ನೀಡಿ ಜಾಣತನದಿಂದ ಕನ್ನಡಕವನ್ನು ವಾಪಾಸ್ ಪಡೆದಿದ್ದಾರೆ. ಆಗ ಕೋತಿ ಕನ್ನಡಕವನ್ನು ಕೆಳಗಿಟ್ಟು ಹಣ್ಣನ್ನು ಹಿಡಿದುಕೊಂಡ ಸಂದರ್ಭದಲ್ಲಿ ಮಹಿಳೆ ಕನ್ನಡಕವನ್ನು ತೆಗೆದುಕೊಂಡರು. ನಂತರ ವ್ಯಕ್ತಿಗೆ ಹಿಂದಿರುಗಿಸಿದರು. ಸದ್ಯ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಮಡಿಕೇರಿ:ಸಿಲಿಂಡರ್‌ ಸ್ಪೋಟದ ಬೆಂಕಿಗೆ ವ್ಯಕ್ತಿ ದುರಂತ ಅಂತ್ಯ,ಆಶ್ರಮ ಆರಂಭಿಸಿ 36 ವೃದ್ಧರಿಗೆ ಆಶ್ರಯ ನೀಡಿದ್ದ ಆಶ್ರಯದಾತನಿಗೆ ಆಗಿದ್ದೇನು?

ಸುಳ್ಯ: ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿ, ಪರಿವಾರಕಾನದಲ್ಲಿ ಆಗಿದ್ದೇನು..?

ಸಂಪಾಜೆ: ಪಿಕಪ್ – ಬೈಕ್ ನಡುವೆ ಅಪಘಾತ, ಬೈಕ್ ಸವಾರ ಕಾಲಿಗೆ ಗಂಭೀರ ಗಾಯ