ದೇಶ-ಪ್ರಪಂಚ

‘ಗಗನಸಖಿ’ ಉದ್ಯೋಗಕ್ಕೆ ಗುಡ್‌ ಬಾಯ್‌!’ಹಂದಿ ಸಾಕಾಣಿಕೆ’ಗೆ ಹಾಯ್‌ ಹಾಯ್‌!!:ತಿಂಗಳಿಗೆ 20 ಲಕ್ಷ ದುಡಿಯುತ್ತಿರುವ ಈ ಯುವತಿ ಯಾರು?

ನ್ಯೂಸ್‌ ನಾಟೌಟ್‌ : ಇತ್ತೀಚೆಗೆ ಕೈ ತುಂಬಾ ಸಂಬಳ ಸಿಗೋ ಉದ್ಯೋಗದ ಕಡೆಗೆ ಗಮನ ಕೊಡುವ ಯುವಕರೇ ಹೆಚ್ಚು. ಮೈ ಬಗ್ಗಿಸಿ ದುಡಿಯುವ ಕೃಷಿ ಕೆಲಸಗಳಿಗೆ ಹಿಂದೇಟು ಹಾಕ್ತಾರೆ.ಹೀಗಾಗಿ ಉದ್ಯೋಗ ಅರಸಿಕೊಂಡು ಮಾಯಾನಗರಿ ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ತೆರಳುತ್ತಿದ್ದಾರೆ. ಆದರೆ ಇಲ್ಲೊಬ್ಬಳು ಯುವತಿ ಉತ್ತಮ ಸಂಬಳ ಸಿಗುತ್ತಿದ್ದ ಕೆಲಸವನ್ನು ತೊರೆದು ಹಂದಿ ಸಾಕಾಣಿಕೆ ಶುರು ಮಾಡಿದ್ದಾಳೆ ..ಈಕೆಯ ಸಾಧಾನಾಗಾಥೆ ಕೇಳಿದ್ರೆ ಮೈ ರೋಮಾಂಚನವಾಗುತ್ತೆ.

ಎಲ್ಲಿಲ್ಲದ ನೆಮ್ಮದಿ ಮನೆಯಲ್ಲಿ ಸಿಗುತ್ತೆ ಅಂತ ಏರ್‌ ಹೋಸ್ಟೆಸ್‌ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್‌ ನಡೆಸಿಕೊಂಡು ಹೋಗುತ್ತಿದ್ದಾಳೆ. ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು ಎನ್ನುವ ದೊಡ್ಡ ಉದ್ದೇಶ ಈಕೆಯದ್ದು, ಇದೀಗ ಈಕೆಯ ಸ್ಟೋರಿ ಸಖತ್‌ ವೈರಲ್‌ ಆಗುತ್ತಿದೆ.

ಚೀನಾದ ಶಾಂಘೈನ ಯಾಂಗ್‌ ಯಾಂಕ್ಸಿ ಎಂಬ 27 ವರ್ಷ ವಯಸ್ಸಿನ ಯುವತಿ ಫ್ಲೈಟ್‌ ಅಟೆಂಡೆಂಟ್‌ ಕೆಲಸವನ್ನು ಬಿಟ್ಟು ಹಂದಿ ಸಾಕಣೆ ಮಾಡುತ್ತಿದ್ದಾಳೆ.ಈಕೆಗೆ ಈ ಕೆಲಸದಲ್ಲಿ ಇದೀಗ ನೆಮ್ಮದಿಯಿದೆಯಂತೆ. ಮೂಲತಃ ಈಶಾನ್ಯ ಚೀನಾದ ಹೈಲಾಂಗ್‌ಜಿಯಾಂಗ್‌ ಪ್ರಾಂತ್ಯದಿಂದ ಬಂದ ಈಕೆ ಉನ್ನತ ವಿಮಾನಯಾನ ಕಂಪೆನಿಯಲ್ಲಿ 5 ವರ್ಷಗಳ ಕಾಲ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಉತ್ತಮ ವೇತನವಿತ್ತು.ಆರಾಮದಾಯಕ ಕೆಲಸ.ಆದರೆ ಅಪ್ಪ ಅಮ್ಮ ಜತೆಗಿಲ್ಲ ಅನ್ನುವ ನೋವು ಆಕೆಯನ್ನು ಕಾಡುತ್ತಿತ್ತು.ಹೀಗಾಗಿ ಅವರೊಂದಿಗೆ ಕಾಲ ಕಳಿಬೇಕು ಎಂಬ ಉದ್ದೇಶವನ್ನಿಟ್ಟು ಕೊಂಡ ಈಕೆ ಏನಾದರೂ ಸ್ವಂತ ಉದ್ಯೋಗ ಮಾಡಬೇಕೆಂದು ತೀರ್ಮಾನಿಸಿದಳು. ನಂತರ ಆಕೆ ಉದ್ಯೋಗವನ್ನು ತೊರೆದು ಹಂದಿ ಸಾಕಣೆ ಕೆಲಸವನ್ನು ಶುರು ಮಾಡಿದ್ದಾಳೆ. ಹೌದು ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್‌ ಒಂದನ್ನು ನಡೆಸುತ್ತಿದ್ದಾಳೆ.

ಏರ್‌ ಹೋಸ್ಟೆಸ್‌ ಕೆಲಸವನ್ನು ತೊರೆದು ಇದೀಗ ಯುವತಿ ಹಂದಿ ಫಾರ್ಮ್‌ ನಡೆಸಿಕೊಂಡು ಹೋಗುತ್ತಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಯಾವುದೇ ಕೆಲ ಮಾಡಬೇಕೆಂದರೂ ಆಯಾ ಕ್ಷೇತ್ರಗಳ ಅನುಭವ ಇರಬೇಕಾಗುತ್ತೆ. ಹೀಗಾಗಿ ಈಕೆ ಹಂದಿ ಸಾಕಾಣಿಕೆ ಕೆಲಸವನ್ನು ಬಹಳ ವೇಗದಿಂದ ಕಲಿಯಲು ಸಾಧ್ಯವಾಗಿದೆ. ಜೊತೆಗೆ ಆಕೆಯ ಪೋಷಕರು ಈಕೆಗೆ ಪ್ರೋತ್ಸಾಹ ನೀಡಿದ್ದಾರೆ. ಅವರು ಕೂಡ ಈಕೆಯ ಕೆಲಸಗಳಿಗೆ ಕೈ ಜೋಡಿಸಿದ್ದಾರೆ.

ಏಪ್ರಿಲ್‌ 2023 ರಲ್ಲಿ ಯಾಂಗ್‌ ಸಂಬಂಧಿಕರ ಜಮೀನಿನಲ್ಲಿ ಹಂದಿ ಫಾರ್ಮ್‌ ಶುರು ಮಾಡಿದಳು. ಈಗ ಆಕೆ ಹಂದಿಗಳ ಆಹಾರ ತಯಾರಿಸುವುದರಿಂದ ಹಿಡಿದು ಅವುಗಳನ್ನು ಸಾಕುವುದರವರೆಗೆ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದಾಳೆ. ಜೊತೆಗೆ ಆಕೆ ತನ್ನ ಹಳ್ಳಿ ಬದುಕಿಗೆ ಸಂಬಂಧಿಸಿದ ವ್ಲಾಗ್‌ಗಳನ್ನು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾಳೆ.ಹಂದಿ ಸಾಕಾಣಿಕೆ, ಇತರೆ ಜಾನುವಾರುಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಸೋಷಿಯಲ್‌ ಮೀಡಿಯಾದದಿಂದ ಕಳೆದ ಎರಡು ತಿಂಗಳಲ್ಲಿ 20,00,000 (೨೦ ಲಕ್ಷ)ಸಂಪಾದನೆ ಮಾಡಿದ್ದೇನೆ ಎಂದು ಯಾಂಗ್‌ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಹಂದಿ ಫಾರ್ಮ್‌ ವಿಸ್ತರಿಸುವುದು ಮಾತ್ರವಲ್ಲದೆ ಹೋಟೆಲ್‌ ಬ್ಯುಸಿನೆಸ್‌ ಆರಂಭಿಸಲು ಇಚ್ಛಿಸುತ್ತೇನೆ ಎಂದು ಆಕೆ ಅಭಿಪ್ರಾಯ ಪಟ್ಟಿದ್ದಾಳೆ.

Related posts

ಅಬ್ಬಬ್ಬಾ..!ಕೊಹ್ಲಿ ಕುಡಿಯುವ ನೀರಿಗೆ ಬರೋಬ್ಬರಿ ೮ ಲಕ್ಷ ಖರ್ಚು ಮಾಡ್ತಾರಂತೆ..!!ಹಾಗಾದರೆ ಅವರು ಕುಡಿಯೋ ನೀರು ಮಾಮೂಲಿ ನೀರಿಗಿಂತ ಎಷ್ಟು ಡಿಫರೆಂಟ್‌? ಅದೆಂಥಾ ನೀರು?

ಅತಿಥಿಯಂತೆ ಬಂದ ವಧುವಿನ ಮಾಜಿ ಪ್ರಿಯಕರನಿಂದ ವರನಿಗೆ ಥಳಿತ..! ಇಲ್ಲಿದೆ ವೈರಲ್ ವಿಡಿಯೋ

ಲೋಹದ ಬೇಲಿ ಮುರಿದು ನುಗ್ಗಿದ ದೈತ್ಯ ಮೊಸಳೆ , ವಿಡಿಯೋ ವೈರಲ್