Uncategorized

ಬೆಂಗಳೂರಿಗೆ ಬರುತ್ತಿದ್ದ ವಿಮಾನದೊಳಗೆ ಹೊಗೆಬಿಟ್ಟು ಮಹಿಳೆಯ ಕಿತಾಪತಿ..!

ನ್ಯೂಸ್ ನಾಟೌಟ್: ಮಹಿಳೆಯೊಬ್ಬಳು ಚಲಿಸುತ್ತಿದ್ದ ವಿಮಾನದಲ್ಲಿ ದೂಮಪಾನ ಮಾಡಿ ಇದೀಗ ಬಂಧನಕ್ಕೆ ಒಳಗಾಗಿದ್ದಾಳೆ.

ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯನ್ನು ಭಾನುವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಭಾನುವಾರ ತಡರಾತ್ರಿ ಇಂಡಿಗೋ ವಿಮಾನ ಸಂಖ್ಯೆ 6E 716 ರ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ. ವಿಮಾನ ಲ್ಯಾಂಡ್‌ ಆಗುವ 30 ನಿಮಿಷ ಮೊದಲು ಪ್ರಿಯಾಂಕಾ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. 

ಪ್ರಿಯಾಂಕಾ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾರೆ ಎಂದು ಶಂಕಿಸಿದ ವಿಮಾನ ಸಿಬ್ಬಂದಿ ಆಕೆಯನ್ನು ಬಾಗಿಲು ತೆರೆಯುವಂತೆ ಕೇಳಿದ್ದಾರೆ. ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ಸಿಗರೇಟ್ ಪತ್ತೆಯಾಗಿದೆ. ಬಳಿಕ ಸಿಬ್ಬಂದಿ ಡಸ್ಟ್‌ಬಿನ್‌ಗೆ ನೀರು ಸುರಿದರು. ವಿಮಾನದ ಕ್ಯಾಪ್ಟನ್ ಪ್ರಿಯಾಂಕಾ ಅವರನ್ನು ಅಶಿಸ್ತಿನ ಪ್ರಯಾಣಿಕೆ ಎಂದು ಘೋಷಿಸಿದರು. ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಪ್ರಿಯಾಂಕಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ವಿಭಾಗಕ್ಕೆ ಒಪ್ಪಿಸಿದ್ದಾರೆ. ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಎಸಗಿದ್ದಕ್ಕಾಗಿ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ.

Related posts

ಬೇಗ ಮಾತನಾಡಲು ಆರಂಭಿಸೋದು ಯಾರು? ನಗರದ ಮಕ್ಕಳೋ, ಅಥವಾ ಹಳ್ಳಿ ಮಕ್ಕಳೋ..? ಅಧ್ಯಯನ ಏನು ಹೇಳುತ್ತೆ?

ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆ ವಿರೋಧಿಸಿದ ಮಾಜಿ ನಕ್ಸಲೀಯರು..! ಸುದ್ದಿಗೋಷ್ಠಿ ಕರೆದು ತನಿಖೆಗೆ ಒತ್ತಾಯ..!

ಪುತ್ತೂರು: ಮನೆ ಬೀಗ ಮುರಿದು ಇನ್ವರ್ಟರ್ , ಟೀವಿ, ನಗದು ಕಳ್ಳತನ