ಕರಾವಳಿಬೆಂಗಳೂರು

ಸ್ಕೂಟರ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ಪತಿಯೊಂದಿಗಿದ್ದ ಪತ್ನಿ , ಪತಿ ಕಣ್ಣ ಮುಂದೆಯೇ ಶಾಲಾ ಬಸ್ ಹರಿದು ಪತ್ನಿ ತಲೆ ಛಿದ್ರ ಛಿದ್ರ

180

ನ್ಯೂಸ್ ನಾಟೌಟ್ : ಬೆಂಗಳೂರಿನ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಖಾಸಗಿ ಶಾಲಾ ಬಸ್‌ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಪತಿಯೊಂದಿಗೆ ತೆರಳುವಾಗ ಸ್ಕೂಟರ್‌ ಸ್ಕಿಡ್‌ ಆಗಿ ಮಹಿಳೆ ಕೆಳಗೆ ಬಿದ್ದಿದ್ದು, ಈ ವೇಳೆ ಬಸ್‌ ಹರಿದಿದ್ದರಿಂದ (Road Accident) ಮಹಿಳೆ ತಲೆ ಛಿದ್ರ ಛಿದ್ರವಾಗಿದೆ.

ಸುಮಂಗಲ (58) ಮೃತ ದುರ್ದೈವಿ. ಪತಿ ಶರಣಪ್ಪ ಜತೆಗೆ ಸ್ಕೂಟರ್‌ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ. ರಸ್ತೆಯಲ್ಲಿದ್ದ ಕಲ್ಲು ಟಯರ್‌ಗೆ ಸಿಲುಕಿ ಸ್ಕೂಟರ್ ಸ್ಕಿಡ್ ಆಗಿದೆ. ಈ ವೇಳೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ‌. ಇದೇ ವೇಳೆ ಹಿಂದೆಯಿಂದ ವೇಗವಾಗಿ ಬರುತ್ತಿದ್ದ ಶಾಲಾ ಬಸ್‌ ಮಹಿಳೆ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಣ್ಣಮುಂದೆ ಪತ್ನಿ ಮೇಲೆ ಬಸ್‌ ಹರಿದಿದ್ದು, ಪತಿಯ ರೋಧನ ಮುಗಿಲು ಮುಟ್ಟಿದೆ.ಪತಿ ಅಳುತ್ತಾ ಮೃತದೇಹದ ಮೇಲೆ ಬಿದ್ದು ನರಳಾಡಿದ ದೃಶ್ಯ ಕಂಡ್ರೆ ಎಂಥವರ ಮನಸ್ಸಾದರೂ ಕರಗದಿರದು. ಈ ಬಗ್ಗೆ ಮಾದನಾಯಕನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಜರುಗುತ್ತಿದ್ದಂತೆ ಶಾಲಾ ಬಸ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಭಾಗದಲ್ಲಿ ರಸ್ತೆ ಗುಂಡಿಮಯವಾಗಿರುವುದರಿಂದ ಹೆಚ್ಚಿನ ಅಪಘಾತಗಳು ಆಗಾಗ ನಡೆಯುತ್ತಿರುತ್ತದೆ.ಆದ್ದರಿಂದ ಸಂಬಂಧ ಪಟ್ಟವರು ಇತ್ತ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ.

See also  ಕಾಂಗ್ರೆಸ್ ಗ್ಯಾರಂಟಿಗಳನ್ನು ಹಾಡಿ ಹೊಗಳಿದ ರಾಜ್ಯಪಾಲ, ಗಣರಾಜ್ಯೋತ್ಸವ ವೇದಿಕೆಯಲ್ಲಿ ರಾಜ್ಯ ಸರ್ಕಾರದ ಗುಣಗಾನ
  Ad Widget   Ad Widget   Ad Widget   Ad Widget   Ad Widget   Ad Widget   Ad Widget