ವೈರಲ್ ನ್ಯೂಸ್

ಅಯೋಧ್ಯೆಯ ಪವಿತ್ರ ಕೊಳದಲ್ಲಿ ಸೊಂಟ ಬಳುಕಿಸಿ ರೀಲ್ಸ್‌..!ಮಹಿಳೆಯ ಬೋಲ್ಡ್ ಡ್ಯಾನ್ಸ್‌ಗೆ ಆಕ್ರೋಶ ಹೊರಹಾಕಿದ ನೆಟ್ಟಿಗರು ಏನಂದ್ರು?ವೈರಲ್ ವಿಡಿಯೋ ನೋಡಿ..

223

ನ್ಯೂಸ್ ನಾಟೌಟ್ :ಸಾಮಾಜಿಕ ಜಾಲತಾಣ ಬಂದ ಮೇಲೆ ಜನ ಮೊಬೈಲ್‌ನಲ್ಲೇ ಮುಳುಗಿ ಹೋಗಿದ್ದಾರೆ.ಅದರಲ್ಲೂ ಇನ್ನೂ ಕೆಲವರು ರೀಲ್ಸ್‌ಗಳಿಗಾಗಿ ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ.

ರೀಲ್ಸ್‌ಗಾಗಿ ವಿಡಿಯೋ ಮಾಡಲು ಹೋಗಿ ಉಡುಪಿಯಲ್ಲೊಬ್ಬ ಯುವಕ ದುರಂತ ಅಂತ್ಯವನ್ನೇ ಕಂಡಿದ್ದ.ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ.ಆದರೂ ಕೂಡ ಇದು ಕಮ್ಮಿಯಾಗುತ್ತಲೇ ಇಲ್ಲ.ಇದೀಗ ಆಯೋಧ್ಯೆಯ ಪವಿತ್ರ ಕೊಳದಲ್ಲಿ ನಿಂತು ಮಹಿಳೆಯೊಬ್ಬರು ರೀಲ್ಸ್‌ ಮಾಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರ ಜೊತೆಗೆ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್‌ನಲ್ಲಿರುವ ಅಯೋಧ್ಯೆಯ ಪವಿತ್ರ ಕೊಳದಲ್ಲಿ ನಿಂತುಕೊಂಡು ಮಹಿಳೆಯೊಬ್ಬರು ಬಾಲಿವುಡ್‌ ಹಾಡೊಂದಕ್ಕೆ ರೀಲ್ಸ್‌ ಮಾಡಿರುವುದು ಸದ್ಯಕ್ಕೆ ವೈರಲ್‌ ಆಗಿದೆ.ಮಾತ್ರವಲ್ಲ ಜನರ ಆಕ್ರೋಶಕ್ಕೂ ಕಾರಣವಾಗಿದೆ.ಈ ರಾಮ್ ಕಿ ಪೈಡಿ ಘಾಟ್‌ ನಲ್ಲಿ ಭಕ್ತರು ಸ್ನಾನ ಮಾಡುತ್ತಾರೆ.ಇಂತಹ ಪವಿತ್ರ ಕೊಳದಲ್ಲೇ ಮಹಿಳೆಗೆ ರೀಲ್ಸ್ ಮಾಡೋದಕ್ಕೆ ಜಾಗ ಸಿಕ್ಕಿರೋದಾ ಎಂದು ಜನ ಸಿಕ್ಕಾಪಟ್ಟೆ ಕೆಂಡಾಮಂಡಲರಾಗಿದ್ದಾರೆ.

ಈ ಮಹಿಳೆ ಬಾಬಿ ಡಿಯೋಲ್-ರಾಣಿ ಮುಖರ್ಜಿ ‘ಜೀವನ್ ಮೇ ಜಾನೆ ಜಾನಾ’ ಎನ್ನುವ ಹಾಡಿಗೆ ಬೋಲ್ಡ್‌ ಆಗಿ ಸೊಂಟ ಬಳುಕಿಸಿ ರೀಲ್ಸ್‌ ಮಾಡಿದ್ದಾರೆ.ವೈರಲ್‌ ವಿಡಿಯೋ ನೋಡಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದು,ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವೀಟ್‌ ನಲ್ಲಿ ಹೇಳಿದ್ದಾರೆ.

See also  ಆ ಎರಡು ಸೈಬೀರಿಯನ್​ ಹುಲಿಗಳನ್ನು ಭಾರತಕ್ಕೆ ತಂದದ್ದೇಕೆ..? ಕಳೆದ ವರ್ಷ ತಂದಿದ್ದ ದಕ್ಷಿಣ ಆಫ್ರಿಕಾದ ಚೀತಾಗಳು ಕೊನೆಯುಸಿರೆಳೆದದ್ದೇಕೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget