Latest

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು!20 ವರ್ಷದ ಯುವತಿಗೆ ಆಗಿದ್ದೇನು? ವಿಡಿಯೋ ವೀಕ್ಷಿಸಿ

564

ನ್ಯೂಸ್‌ ನಾಟೌಟ್: ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ.ವರ್ಷಾ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಆಗಿದ್ದೇನು?

ಮಹಾರಾಷ್ಟ್ರದ ಧಾರಾಶಿವ್​ನ ಕಾಲೇಜೊಂದರಲ್ಲಿ ಈ ಘಟನೆ ನಡೆದಿದ್ದು, ಈಕೆ ಖರತ್ ಪರಂಡದ ಆರ್‌ಜಿ ಶಿಂಧೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭದಂದು ಸಂತೋಷದಿಂದ ಭಾಷಣ ಮಾಡುತ್ತಿದ್ದಳು.  ಭಾಷಣ ಮಾಡುತ್ತಿದ್ದಾಗ ಆಕೆಗೆ ಹಠಾತ್ ಹೃದಯಾಘಾತವಾಗಿ ಸಾವು ಸಂಭವಿಸಿದೆ  ಎನ್ನಲಾಗಿದೆ.ಬೀಳ್ಕೊಡುಗೆ ಸಮಾರಂಭದಂದು ವರ್ಷಾ ಮಾತನಾಡುವಾಗ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಪರಾಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ವರ್ಷಾ 8 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿರಲಿಲ್ಲ ಮತ್ತು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹಠಾತ್ ಹೃದಯಾಘಾತವಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ.

See also  ನಾಪೊಕ್ಲು: ಪೊಲೀಸ್‌ ಠಾಣೆಯಲ್ಲಿ ಸೀಮಂತದ ಸಂಭ್ರಮ!ಬಳೆ, ಕುಂಕುಮ, ವಸ್ತ್ರ, ತಿಂಡಿ ತಿನಿಸುಗಳು, ತಾಂಬೂಲ  ನೀಡಿ ಶುಭ ಹಾರೈಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget