ಕೊಡಗು

ಮಡಿಕೇರಿ:ಜಾಗದ ವಿಷಯದಲ್ಲಿ ತಕರಾರು, ವಕೀಲ-ಮಹಿಳೆ ಮಧ್ಯೆ ಬೀದಿ ರಂಪಾಟ

300

ನ್ಯೂಸ್ ನಾಟೌಟ್:ಮಡಿಕೇರಿಯ ಕುಶಾಲನಗರದಲ್ಲಿ ಬೀದಿ ಕಾಳಗ ನಡೆದಿದೆ. ಮಹಿಳೆ ಮತ್ತು ವಕೀಲ ಹೊಡೆದಾಡಿಕೊಂಡು ಕೆಲಕಾಲ ಅಶಾಂತ ವಾತಾವರಣವೇ ಸೃಷ್ಟಿಯಾಗಿತ್ತು.ಈ ಘಟನೆ ಮಡಿಕೇರಿಯ ಕುಶಾಲನಗರದ ಪಟೇಲ್ ಬಡಾವಣೆಯಲ್ಲಿ ನಡೆದಿದೆ.

ಮಹಿಳೆಯೊಬ್ಬರು ಮನೆ ನಿರ್ಮಾಣ ಮಾಡುತ್ತಿದ್ದು, ಈ ವೇಳೆ ಮಹಿಳೆಗೆ ವಕೀಲರೊಬ್ಬರು ಮನೆ ನಿರ್ಮಾಣ ಮಾಡುವ ವೇಳೆ ಸ್ವಲ್ಪ ಜಾಗಬಿಟ್ಟು ನಿರ್ಮಿಸುವಂತೆ ಸೂಚಿಸಿದ್ದರು. ಆದರೆ ಮಹಿಳೆ ವಕೀಲ ಸಂತೋಷ್ ಕುಮಾರ್ ಅವರ ಮಾತಿಗೆ ಸ್ಪಂದಿಸದೇ ಇರುವುದಕ್ಕೆ ಈ ಬೀದಿ ಕಾಳಗ ಆರಂಭವಾಗಿದೆ. ಮಹಿಳೆ ಸ್ವಲ್ಪವೂ ಜಾಗ ಬಿಡದೇ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಬೀದಿ ರಂಪಾಟವೇ ನಡೆದಿದೆ. ಇವರಿಬ್ಬರು ಪರಸ್ಪರ ಬಡಿದಾಡಿ ಕೊಂಡಿದ್ದಾರೆ.

ಇವರಿಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಮನೆಯ ಜಾಗದ ವಿಷಯವಾಗಿ ಇವರಿಬ್ಬರು ತಗಾದೆ ತೆಗೆಯುತ್ತಿದ್ದರು. ಶನಿವಾರ ಜಗಳ ಮತ್ತಷ್ಟು ತಾರಕಕ್ಕೆ ಏರಿದೆ. ವಕೀಲ ಸಂತೋಷ್ ಮಹಿಳೆಗೆ ಕೆಟ್ಟದಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ವಕೀಲನಿಗೆ ಮಹಿಳೆ ಸುಮಿತ್ರಾ ಕಪಾಳಮೋಕ್ಷ ಮಾಡಿದ್ದಾಳೆ. ಮಹಿಳೆ ಹೊಡೆಯುತ್ತಿದ್ದಂತೆ ವಕೀಲ ತೀವ್ರ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇದೀಗ ಇಬ್ಬರ ಜಗಳ ಜೋರಾಗುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ.ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ಅವರನ್ನು ಬಿಡಿಸಿದ್ದಾರೆ. ಗಾಯಗೊಂಡಿರುವ ಸುಮಿತ್ರಾ ಅವರನ್ನು ಮಡಿಕೇರಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ವಕೀಲ ಮತ್ತು ಆತನ ಪತ್ನಿ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

See also  ಅಬ್ಬರಿಸಿದ ಪಯಸ್ವಿನಿ ನದಿ, ಕೊಯನಾಡಿನಲ್ಲಿ ಮತ್ತೆ ಅವಘಡ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget