ಕರಾವಳಿ

ಮಹಿಳೆಯೊಂದಿಗೆ ಅಶ್ಲೀಲ ಫೋಟೋ ವೈರಲ್,ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ ಶಾಸಕ ಮಠಂದೂರು

310

ನ್ಯೂಸ್ ನಾಟೌಟ್ : ಚುನಾವಣಾ ದಿನಾಂಕ ಸಮೀಪಿಸುತ್ತಿದೆ.ರಾಜಕೀಯ ಪಕ್ಷದ ನಾಯಕರು ಬ್ಯುಸಿಯಾಗಿದ್ದಾರೆ. ಈ ನಡುವೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು  ನೆಕ್ಕಿಲಾಡಿ ಮೂಲದ ಮಹಿಳೆಯೊಬ್ಬರ ಜತೆ ಆತ್ಮೀಯವಾಗಿರುವ ಕೆಲ ಫೊಟೊಗಳು ಫೇಸ್‌ ಬುಕ್‌, ವಾಟ್ಸಾಪ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗುತ್ತಿದೆ. ಈ ಕುರಿತು  ಶಾಸಕ ಮಠಂದೂರು ಅವರು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಅಲಸೂರು ಗೇಟ್‌ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಮಠಂದೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಈ ಕುರಿಂತೆ ಸ್ಪಷ್ಟನೆ ನೀಡಿದ್ದ ಸಂತ್ರಸ್ತ ಮಹಿಳೆ ನನಗೂ ಸಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ,ಆ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇದೀಗ ಸಂಜೀವ ಮಠಂದೂರು ಅವರು ಕೂಡ ದೂರು ದಾಖಲಿಸಿದ್ದು, ಚುನಾವಣಾ ಸಂದರ್ಭ, ಅದರಲ್ಲೂ ಟಿಕೆಟ್‌ ಘೋಷಣೆಗೆ ಪಕ್ಷ ಸಿದ್ಧತೆ ನಡೆಸುತ್ತಿರುವ ವೇಳೆ ಮಾನ ಹಾನಿ ಮಾಡುವ ದುರುದ್ದೇಶದಿಂದ ಎಡಿಟೆಡ್ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಡಲಾಗಿದೆ ಎಂದಿದ್ದು, ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿರುವುದಾಗಿ ಶಾಸಕ ಮಠಂದೂರು ಅವರು ಹೇಳಿದ್ದಾರೆ.

See also  ಬೆಳ್ತಂಗಡಿ :ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್‌ಮ್ಯಾನ್..?, ಮಾಜಿ ಶಾಸಕ ವಸಂತ ಬಂಗೇರ ಮನವಿಗೆ ಸ್ಪಂದಿಸಿದ ಗೃಹಸಚಿವ ಪರಮೇಶ್ವರ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget