ಕ್ರೈಂ

ಮತ್ತೆ ಕಾಡಾನೆಯ ಅಟ್ಟಹಾಸ!,ಅಕ್ಕ ಸ್ಥಳದಲ್ಲೇ ದುರಂತ ಅಂತ್ಯ,ತಂಗಿ ಸ್ಥಿತಿ ಗಂಭೀರ

258

ನ್ಯೂಸ್ ನಾಟೌಟ್:ಕಾಡಾನೆ ದಾಳಿಗೆ ಒಳಗಾಗಿ ಅಕ್ಕ ಮೃತಪಟ್ಟಿದ್ದು,ತಂಗಿ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.ತೋಟದ ಕೆಲಸಕ್ಕೆಂದು ಹೊರಟಿದ್ದವರ ಮೇಲೆ ಏಕಾಏಕಿ ಆನೆ ದಾಳಿ ನಡೆಸಿದ ಪರಿಣಾಮ ಈ ದುರಂತ ಸಂಭವಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾನಗರದಲ್ಲಿ ಈ ದುರ್ಘಟನೆ ನಡೆದಿದೆ.ಜಯಮ್ಮ (50) ಮೃತ ಮಹಿಳೆಯಾಗಿದ್ದು, ವೆಂಕಲಕ್ಷ್ಮಮ್ಮ (45) ಗಂಭೀರ ಗಾಯಗೊಂಡ ಮಹಿಳೆ ಎಂದು ತಿಳಿದು ಬಂದಿದೆ.ಜಮೀನಿಗೆ ಕೆಲಸ ಮಾಡಲೆಂದು ಹೊರಟು ಹೋಗುವ ಸಂದರ್ಭ ಈ ಘಟನೆ ನಡೆದಿದೆ. ಗಾಯಾಳು ವೆಂಕಟಲಕ್ಷ್ಮಮ್ಮ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಗುತ್ತಿಗಾರು: ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ಆತ್ಮಹತ್ಯೆಗೆ ಶರಣು, ಮಗ, ಸೊಸೆ ತೀರಿಕೊಂಡ ಬಳಿಕ ಆಕೆಗೆ ಆಗಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget