Latestಸುಳ್ಯ

ಅಂಕತ್ತಡ್ಕ:ಓಡ್ರಪ್ಪೋ ಓಡಿ.. ಕಾಡುಕೋಣಗಳು ಬಂದ್ವು..!ಜನರನ್ನು ಕ್ಯಾರೇ ಮಾಡದೇ ಹಾಡಹಗಲಲ್ಲೇ ರಸ್ತೆಯಲ್ಲಿ ಹೇಗೆ ಓಡಾಡ್ತಿವೆ ನೋಡಿ..!

766
Spread the love

ನ್ಯೂಸ್‌ ನಾಟೌಟ್‌ :ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ.ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಕಾಡು ಪ್ರಾಣಿಗಳು ಕಾಣ ಸಿಗುತ್ತಿದ್ದು ಕೆಲವೊಂದು ಕಡೆ ತೊಂದರೆ ಅನುಭವಿಸುತ್ತಿರುವ ಘಟನೆ ಬಗ್ಗೆಯೂ ವರದಿಯಾಗಿದೆ.ಆನೆ,ಹುಲಿ,ಚಿರತೆ ಸೇರಿದಂತೆ ಕಾಡು ಕೋಣಗಳ ಪ್ರತ್ಯಕ್ಷದಿಂದಾಗಿ ಜನ ಕಂಗಾಲಾಗಿದ್ದಾರೆ. ಇದೀಗ ಮಾಡಾವು-ಬೆಳ್ಳಾರೆ ರಸ್ತೆಯ ಅಂಕತಡ್ಕದಲ್ಲಿ ಹಾಡುಹಗಲೇ ಕಾಡುಕೋಣ ಸಂಚಾರ ಕಂಡುಬಂದಿದ್ದು, ಸ್ಥಳೀಯರ ನಿದ್ದೆಗೆಡಿಸುವಂತೆ ಮಾಡಿದೆ.

ಕಳೆದ ಕೆಲವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡುಕೋಣಗಳು ಸಂಚರಿಸುತ್ತಿದ್ದು, ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಎದುರಾಗಿದೆ.ವಿಶೇಷವಾಗಿ ಹಾಡಹಗಲಲ್ಲೇ ಕಾಡುಕೋಣಗಳು ಕಂಡು ಬಂದರೆ ದಾರಿಹೋಕರ , ವಿದ್ಯಾರ್ಥಿಗಳ ಹಾಗೂ ವಾಹನ ಸವಾರರ ಪಾಡೇನು? ಎಂಬ ಚಿಂತೆ ಕಾಡಿದೆ.

See also  NMPUC ಯಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ, ಮುಖ್ಯ ಅತಿಥಿಯಾಗಿ ಹಿರಿಯ ವಿದ್ಯಾರ್ಥಿನಿ ಭಾಗಿ
  Ad Widget   Ad Widget   Ad Widget