ದೇಶ-ವಿದೇಶ

ಪತ್ನಿಯನ್ನು ಹನಿಮೂನ್‌ಗೆಂದು ಕರೆದುಕೊಂಡು ಹೋಗಿ 10 ಲಕ್ಷಕ್ಕೆ ಮಾರಿದ ಭೂಪ..! ಊರಿಗೆ ವಾಪಸಾಗಿ ಅಂಚೆಯಲ್ಲೇ ತಲಾಖ್‌ ನೀಡಿದ ಪತಿ..!

160

ನ್ಯೂಸ್‌ ನಾಟೌಟ್‌: ಜಗತ್ತಿನಲ್ಲಿ ಯಾವ ರೀತಿಯ ವ್ಯಕ್ತಿಗಳಿದ್ದಾರೆ ಎಂಬುವುದನ್ನೂ ಊಹಿಸಲು ಕಷ್ಟವಾಗುತ್ತದೆ. ಇಲ್ಲೊಬ್ಬ ಭೂಪ ಪತ್ನಿಯನ್ನು ಹನಿಮೂನ್ ಗೆ ಎಂದು ನಂಬಿಸಿ ಕತಾರ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಶೇಖ್‌ಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಿಹಾರದ ಪಾಟ್ನಾದಲ್ಲಿ 2021 ರಲ್ಲಿ ಶಹಬಾಜ್ ಹಸನ್ ಎಂಬಾತನಿಗೆ ಓರ್ವ ಮಹಿಳೆ ಜತೆ ವಿವಾಹವಾಗಿತ್ತು. ಮನೆಯವರಿಗೆ ಯುವಕ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ತಿಳಿಸಿದ್ದರು. ಆದರೆ, ಮದುವೆ ಬಳಿಕ ಗಂಡನ ಮನೆಗೆ ಹೋದಾಗ ಪತಿ ಎನ್ ಜಿಒದಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2021ರ, ಅಕ್ಟೋಬರ್ 29ರಂದು, ಅವನು ತನ್ನ ಹೆಂಡತಿಯನ್ನು ಮನವೊಲಿಸಿ ಹನಿಮೂನ್​​ಗೆಂದು ಕತಾರ್‌ಗೆ ಕರೆದುಕೊಂಡು ಹೋಗಿದ್ದಾನೆ. ಹೋಗಿ ಅಲ್ಲಿನ ಶೇಖ್‌ಗೆ 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಅಲ್ಲದೇ ಪತ್ನಿಯನ್ನು ಮಾರಾಟ ಮಾಡಿ ಪಾಟ್ನಾಗೆ ತಲುಪಿದ್ದ. ಈತ ಪತ್ನಿಗೆ ಅಂಚೆ ಮೂಲಕ ತ್ರಿವಳಿ ತಲಾಖ್ ಕಳುಹಿಸಿದ್ದಾನೆ. ಮತ್ತೊಂದೆಡೆ, ಭದ್ರತಾ ಸಿಬ್ಬಂದಿಯ ಸಹಾಯದಿಂದ ಮಹಿಳೆ ತನಗಾದ ಕಹಿ ಅನುಭವವನ್ನು ಪತ್ರದಲ್ಲಿ ಬರೆದು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದ್ದಾಳೆ. ನಂತರ ರಾಯಭಾರ ಕಚೇರಿಯ ಸಿಬ್ಬಂದಿ ಆಕೆಯನ್ನು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತಕ್ಕೆ ಬಂದ ಮಹಿಳೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ.

ಇದೀಗ ಮಹಿಳೆ ರಾಜಧಾನಿಯ ದಿಘಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

See also  ಮತ್ತೊಂದು ಎರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ..! ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಕೋಲ್ಕತ್ತಾದಲ್ಲಿ ಕೆಳಗಿಳಿಸಿದ ಸಿಬ್ಬಂದಿ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget