ರಾಜ್ಯವೈರಲ್ ನ್ಯೂಸ್

ಸಾಲ ತೀರಿಸಲು ಪತ್ನಿಯನ್ನೇ ಮಾರಟಕ್ಕಿಟ್ಟ ಪತಿ..! ಪರ ಪುರುಷನ ಜೊತೆ ಮಲಗಲು ನಿರಾಕರಿಸಿದಕ್ಕೆ ಉಸಿರುಗಟ್ಟಿಸಿ ಕೊಲೆ..!

ನ್ಯೂಸ್ ನಾಟೌಟ್: ಸಾಲ ತೀರಿಸಲು ಪರ ಪುರುಷನ ಜೊತೆ ಮಲಗಲು ನಿರಾಕರಿಸಿದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ.

ಆರೋಪಿ ಪತಿ ಭೀಮಣ್ಣ ಉಸಿರುಗಟ್ಟಿಸಿ ತನ್ನ ಪತ್ನಿ ಶರಣಬಸಮ್ಮ ಹತ್ಯೆಗೈದಿದ್ದಾನೆ. ಮರಣೋತ್ತರ ಪರೀಕ್ಷೆ ವರದಿ ನಂತರ ಕೊಲೆ ಕೇಸ್ ದಾಖಲಾಗಿದ್ದು ಹಂತಕ ಭೀಮಣ್ಣ ಸೇರಿ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಪತ್ನಿಯನ್ನು ಕೊಂದು ಹೃದಯಾಘಾತದಿಂದ ಸಾವು ಎಂದು ಬಿಂಬಿಸಿದ್ದ ಎನ್ನಲಾಗಿದೆ.

ಕಳೆದ ವರ್ಷ ಶರಣಬಸಮ್ಮ ಜೊತೆ ಆರೋಪಿ ಭೀಮಣ್ಣ ಮದುವೆಯಾಗಿತ್ತು. 2-3 ತಿಂಗಳ ಸುಖ ಸಂಸಾರ ನಡೆಸಿದ್ದ ದಂಪತಿ ಬಳಿಕ ಒಂದೊಂದಾಗೇ ಪತಿ ಕರಾಳ ಮುಖದ ಪರಿಚಯವಾಗಿತ್ತು.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣ ನಿವಾಸಿಯಾಗಿರುವ ಕೊಲೆ ಆರೋಪಿ ಭೀಮಣ್ಣ, ತಾನು ಮಾಡಿದ್ದ ಸಾಲ ತೀರಿಸಲು ಪತ್ನಿಯ ದೇಹ ಮಾರಾಟಕ್ಕಿಟ್ಟಿದ್ದ. ಸಾಲ ಪಡೆದಿರುವ ವ್ಯಕ್ತಿಯ ಜೊತೆ ಪಲ್ಲಂಗ ಹಂಚಿಕೊಳ್ಳುವಂತೆ ಪೀಡಿಸಿದ್ದ. ಪಲ್ಲಂಗ ಹಂಚಿಕೊಂಡರೆ ಮಕ್ಕಳಾಗುತ್ತೆ, ಸಾಲ ತೀರುತ್ತೆ ಎಂದು ಕಿರುಕುಳ ನೀಡುತ್ತಿದ್ದ. ಇದನ್ನು ಧಿಕ್ಕರಿಸಿದ್ದಕ್ಕೆ ಪತ್ನಿ ಶರಣಬಸಮ್ಮಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಜು.25ರಂದು ನಡೆದಿದ್ದ ಕೊಲೆ ಕೇಸ್ ಅನ್ನು ಪೊಲೀಸರು ಸೆ.14 ರಂದು ಭೇದಿಸಿದ್ದಾರೆ.

https://newsnotout.com/2024/09/munirathna-case-caste-and-threat-issue-kannada-news-2-days-police-custody/

Related posts

ಅಕ್ರಮ ಸಾಹಸ ಕ್ರೀಡಾ ಕಂಪನಿಯ ಎಡವಟ್ಟಿಗೆ 2 ಸಾವು..! ಪ್ಯಾರಾಗ್ಲೈಡಿಂಗ್ ವೇಳೆ ಕಂದಕಕ್ಕೆ ಬಿದ್ದ ಪ್ರವಾಸಿ ಮಹಿಳೆ..!

ಬಸ್ಸಿಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳಿಗೆ ‘ಯಮ’ನಾದ ಖಾಸಗಿ ಬಸ್! 15ರ ವಿದ್ಯಾರ್ಥಿನಿಯ ದುರಂತ ಅಂತ್ಯ..!

ರಾಜಭವನಕ್ಕೂ ಬಾಂಬ್ ಬೆದರಿಕೆ ಕರೆ ಮಾಡಿದ್ಯಾರು..? ಶಾಲೆಗಳ ಬೆದರಿಕೆ ಬೆನ್ನಲ್ಲೆ ಈ ನಿಗೂಢ ಕರೆ ಬಂದದ್ದೆಲ್ಲಿಂದ?