ಕರಾವಳಿ

ಗೃಹಿಣಿ ಕೊಲೆ, ಗಂಡ ಪೊಲೀಸ್ ವಶ, ಮಗು ಅನಾಥ

ನ್ಯೂಸ್ ನಾಟೌಟ್: ಕೊಕ್ಕಡದಲ್ಲಿ ಗೃಹಿಣಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಇದೀಗ ಪೊಲೀಸರು ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದಂಪತಿಗೆ ಆರು ವರ್ಷದ ಗಂಡು ಮಗುವಿದ್ದು ಅಪ್ಪ –ಅಮ್ಮ ಇಲ್ಲದೆ ಆ ಮಗು ಅನಾಥವಾಗಿದೆ.

ಕೊಡಗಿನ ಸೋಮವಾರಪೇಟೆಯ ಗಣೇಶ್ ಗೌಡ ಹತ್ತು ವರ್ಷದ ಹಿಂದೆ ಸುಳ್ಯದ ಮೋಹಿನಿ ಎಂಬುವವರನ್ನು ಮದುವೆಯಾಗಿದ್ದರು. ಕೊಕ್ಕಡದ ಅಗರ್ತ ಎಂಬಲ್ಲಿ ವಾಸವಾಗಿದ್ದರು. ಒಂದು ಕಡೆ ಮಹಿಳೆಯ ಶವ ಸುಡುವುದಕ್ಕೂ ಸಂಬಂಧಿಕರಿಲ್ಲ. ಮತ್ತೊಂದು ಕಡೆ ಮಗು ಅನಾಥವಾಗಿದೆ. ಶವ ಸುಡುವುದಕ್ಕೆ ಪಂಚಾಯತ್ ವತಿಯಿಂದ ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಸದ್ಯ ಬಾಲಕನನ್ನು ಕಲ್ಯಾಣ ಕೇಂದ್ರಕ್ಕೆ ಸೇರಿಸುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬಾಲಕನನ್ನು ಮಂಗಳೂರಿನ ಬೊಂದೆಲ್ ನಲ್ಲಿರುವ ಚೈಲ್ಡ್‌ ವೆಲ್ ಫೇರ್ ಸೆಂಟರ್ ಗೆ ಧರ್ಮಸ್ಥಳ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

Related posts

ಸುಳ್ಯಕ್ಕೆ ವರ್ಗಾವಣೆಯಾದ್ರೂ ಮಂಗಳೂರೇ ಬೇಕೆಂದು ಹಠ ಹಿಡಿದು ಕುಳಿತ ಅಧಿಕಾರಿ, ಯಾರಿವರು ಮಹಿಳಾ ಅಧಿಕಾರಿ..?

ಮಂಗಳೂರು:ಅನಾಮಧೇಯ ವ್ಯಕ್ತಿಯಿಂದ ಫೋನ್ ಮುಖಾಂತರ ಜೀವ ಬೆದರಿಕೆ,ದ.ಕ. ಜಿಲ್ಲಾಧಿಕಾರಿ ರವೀಂದ್ರರಿಗೆ ಕರೆ ಮಾಡಿ ಹೇಳಿದ್ದೇನು?

ಗ್ರಾಹಕರ ಸೋಗಿನಲ್ಲಿ ಬಂದು ಬಟ್ಟೆ ಕಳವುಗೈದ ಚಾಲಾಕಿ ಕಳ್ಳಿ !,ದೃಶ್ಯ ಸಿಸಿಟಿವಿಯಲ್ಲಿ ಸೆರೆ