ಕ್ರೈಂವೈರಲ್ ನ್ಯೂಸ್

ಪತ್ನಿಯನ್ನು ಕೇಳದೆ ಟೊಮೆಟೋ ಹಾಕಿ ಸಾಂಬಾರು ಮಾಡಿದ ಪತಿ ಮೇಲೆ ಸಿಟ್ಟಾಗಿ ಮನೆಬಿಟ್ಟು ಹೋದ ಪತ್ನಿ..! ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ..!

218

ನ್ಯೂಸ್ ನಾಟೌಟ್ : ಟೊಮೆಟೊ(Tomato) ಬೆಲೆ ಗಗನಕ್ಕೇರುತ್ತಿದ್ದು, ಇದರ ನಡುವೆ ಟೊಮೆಟೊ ಬಗ್ಗೆ ಹತ್ತು ಹಲವು ಬಗೆಯ ರೀಲ್ಸ್​ಗಳು, ಕಥೆಗಳು ಹುಟ್ಟಿಕೊಳ್ಳುತ್ತಿವೆ. ಇದೆಲ್ಲದರ ನಡುವೆ ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ ಮಾಡಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್​ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಟೊಮೆಟೊ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ಟಿಫಿನ್ ಸರ್ವೀಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಇತ್ತೀಚೆಗೆ ತನ್ನ ಹೆಂಡತಿಯನ್ನು ಕೇಳದೆ ಅಡುಗೆ ಮಾಡುವಾಗ ಎರಡು ಟೊಮೆಟೊಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಆತನ ಪತ್ನಿ ಟೊಮೆಟೊ ಬಳಕೆಯ ಬಗ್ಗೆ ತನ್ನನ್ನು ಕೇಳದ ಕಾರಣ ಅಸಮಾಧಾನಗೊಂಡಿದ್ದರು. ವಾದದ ಬಳಿಕ ತಮ್ಮ ಮಗಳೊಂದಿಗೆ ಮನೆಯನ್ನು ಬಿಡಲು ನಿರ್ಧರಿಸಿದರು. ಅವರನ್ನು ಹುಡುಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ, ಅವರು ಸಹಾಯಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಸಂಜೀವ್ ಅವರು ಮಾಡುತ್ತಿದ್ದ ಖಾದ್ಯಕ್ಕೆ ಎರಡು ಟೊಮೆಟೊ ಹಾಕಿದ್ದರಿಂದ ವಾಗ್ವಾದ ಶುರುವಾಯಿತು. ಮೂರು ದಿನದಿಂದ ಪತ್ನಿಯೊಂದಿಗೆ ಮಾತನಾಡಿಲ್ಲ, ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಂಜೀವ್ ಅವರ ಪತ್ನಿಯನ್ನು ಸಂಪರ್ಕಿಸುವುದಾಗಿ ಮತ್ತು ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಟೊಮೆಟೊ ಒಂದು ನೆಪವಾಗಿದ್ದು, ಇದರ ಹಿಂದೆ ಬೇರೆಯೇ ಕಾರಣವಿರಬಹುದು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.

See also  ಸೈಫ್ ಅಲಿ ಖಾನ್ ​ಗೆ ಚಾಕು ಇರಿದ ಶಂಕಿತನ ಫೋಟೋ ರಿವೀಲ್..! ಇಲ್ಲಿದೆ ಸಿಸಿಟಿವಿ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget