ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಬೆಳ್ಳಾರೆ: ತಡರಾತ್ರಿ ಪತಿ-ಪತ್ನಿ ನಿದ್ರೆಯಲ್ಲಿದ್ದಾಗ ಮಂಕಿ ಕ್ಯಾಪ್ ಹಾಕ್ಕೊಂಡು ಬಂದ್ರು ಅಪರಿಚಿತರು..! ಕರೆಂಟ್ ಮೈನ್ ಸ್ವಿಚ್ ಆಫ್ ಮಾಡಿ ಹೇಳಿದ್ದೇನು..? ಮಹಿಳೆ ಪೊಲೀಸರಿಗೆ ಕೊಟ್ಟ ದೂರಿನಲ್ಲೇನಿದೆ..?

296

ನ್ಯೂಸ್ ನಾಟೌಟ್: ತಡರಾತ್ರಿ ಪತಿ-ಪತ್ನಿ ನಿದ್ರೆಯಲ್ಲಿದ್ದಾಗ ನಾಲ್ಕೈದು ಮಂದಿ ಮುಸುಕುಧಾರಿಗಳು ಮನೆಯ ಮೈನ್ ಸ್ವಿಚ್ ಆಫ್ ಮಾಡಿ ಬೆದರಿಸಿದ್ದಾರೆ ಅನ್ನುವ ಪ್ರಕರಣವೊಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಕುರಿತಂತೆ ಇದೀಗ ಪೊಲೀಸರು 59/2023 ಕಲಂ: 447, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸೆ.1ರಂದು ಕೊಳ್ತಿಗೆ ಗ್ರಾಮದ ಮನೆಯೊಂದಕ್ಕೆ ಅಪರಿಚಿತರ ತಂಡ ನುಗ್ಗುತ್ತದೆ. ಮಂಕಿ ಕ್ಯಾಪ್ ಹಾಕ್ಕೊಂಡು ಬಂದಿದ್ದ ಅಪರಿಚಿತರು ಮನೆಗೆ ಏಕಾಏಕಿ ನುಗ್ಗಿದವರೆ ವಿದ್ಯುತ್ ಲೈನ್ ನ ಮೈನ್ ಸ್ವಿಚ್ ಅನ್ನು ಆಫ್ ಮಾಡುತ್ತಾರೆ. ನಂತರ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ಅಷ್ಟಕ್ಕೂ ಯಾವ ಕೆಲಸ ಎಂದು ಕೇಳಿದ್ರೆ ನೀವೇ ಶಾಕ್ ಆಗ್ತೀರಾ..!

ಹೌದು, ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಎಲ್ಲವನ್ನೂ ಸವಿವರವಾಗಿ ವಿವರಿಸಿದ್ದಾಳೆ. ಮೈನ್ ಸ್ವಿಚ್ ಆಫ್ ಮಾಡಿದವರು ನನ್ನ ಗಂಡನನ್ನು ಹೊರಗೆ ಬರುವಂತೆ ಹೇಳಿದ್ದಾರೆ. ಹೊರಗೆ ಬಂದ ಬಳಿಕ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕೊಚ್ಚಿ ಹಾಕುವುದಾಗಿ ಬೆದ* ರಿಕೆ ಹಾಕಿದ್ದಾರೆ. ನೀವು ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಕೂಡಲೇ ಹಿಂಪಡಿಯಬೇಕು ಇಲ್ಲದಿದ್ದರೆ ನಿಮ್ಮ ಇಡೀ ಕುಟುಂಬವನ್ನು ನಾಶ ಮಾಡುವುದಾಗಿ ಬೆದ* ರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೇಲ್ನೋಟಕ್ಕೆ ಪರಿಚಿತ ವ್ಯಕ್ತಿಗಳೇ ಈ ಕೃತ್ಯವನ್ನು ಎಸಗಿರಬಹುದು ಎಂದು ಪೊಲೀಸರು ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ.

ಈ ಘಟನೆಯಿಂದ ನೊಂದ ಮಹಿಳೆ ತಕ್ಷಣ ೧೧೨ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈ ವೇಳೆ ಅಪರಿಚಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

See also  ಸುಳ್ಯ:ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ತೊಡಿಕಾನದ ಯುವಕ..!ಕಾರಣ ನಿಗೂಢ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget