ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮೂಕ ಹೆಂಡತಿಗಾಗಿ ದೇವಿಯ ಮುಂದೆ ನಾಲಿಗೆ ಕತ್ತರಿಸಿಕೊಂಡ ವ್ಯಕ್ತಿ..! ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು..?

ನ್ಯೂಸ್ ನಾಟೌಟ್: ಭಕ್ತಿ ಪರವಶನಾಗಿ ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಿದ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ರಾಜೇಶ್ವರ್ ನಿಶ್ವದ್ (40) ಎಂಬ ವ್ಯಕ್ತಿಯೇ ನಾಲಿಗೆ ಕತ್ತರಿಸಿಕೊಂಡಾತ ಎಂದು ಗುರುತಿಸಲಾಗಿದೆ.

ರಕ್ತಸ್ರಾವದಿಂದ ತೀವ್ರ ಗಾಯಗೊಂಡಿರುವ ರಾಜೇಶ್ವರ್‌ನನ್ನು ದುರ್ಗ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಥಾನೌದ್ ಎಂಬ ಹಳ್ಳಿಯ ರಾಜೇಶ್ವರ್, ಬುಧವಾರ(ಮೇ.೮) ಕೆರೆಯೊಂದರ ಬಳಿ ಇರುವ ದೆವಸ್ಥಾನಕ್ಕೆ ಹೋಗಿ ಮಂತ್ರ ಪಠಿಸಿ ಹರಿತವಾದ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿದ್ದಾನೆ ಎನ್ನಲಾಗಿದ್ದು. ತನ್ನ ಪತ್ನಿ ಮೂಕಿಯಾಗಿರುವುದಕ್ಕೆ ಮನನೊಂದು ರಾಜೇಶ್ವರ್ ದೇವಿಗೆ ನಾಲಿಗೆಯನ್ನು ಸಮರ್ಪಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Related posts

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾಧುಗಳೊಂದಿಗೆ ಕುಂಭಮೇಳದಲ್ಲಿ ಪವಿತ್ರ ಸ್ನಾನ, ಮೋದಿ ಕುಂಭಮೇಳಕ್ಕೆ ಬರಲು ದಿನಾಂಕ ನಿಗದಿ

ಕಳೆದ ಚುನಾವಣೆಯಲ್ಲಿ ತನ್ನ ಕ್ಷೇತ್ರ ಬಿಟ್ಟುಕೊಟ್ಟಿದ್ದ ಯತೀಂದ್ರ ಸಿದ್ದರಾಮಯ್ಯಗೆ ಬಿಗ್ ಗಿಫ್ಟ್..!ಯತೀಂದ್ರ ಸಿದ್ದರಾಮಯ್ಯ ಸೇರಿ 8 ಮಂದಿಗೆ ವಿಧಾನ ಪರಿಷತ್ ಟಿಕೆಟ್‌

10 ಗ್ಯಾರಂಟಿಗಳನ್ನು ಘೋಷಿಸಿದ ಅರವಿಂದ ಕೇಜ್ರಿವಾಲ್..! ದಿಲ್ಲಿ ಸಿಎಂ ಬಹಳ ದಿನ ಜೈಲಲ್ಲಿ ಇದ್ದ ಕಾರಣ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದ ಆರ್ ಅಶೋಕ್