ಕ್ರೈಂಬೆಂಗಳೂರುವೈರಲ್ ನ್ಯೂಸ್

ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್‌ ಎರಚುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತನಿಂದ ಬೆದರಿಕೆ..! ಕೆಲಸದಿಂದ ವಜಾಗೊಳಿಸಿದ ಕಂಪನಿ..!

242

ನ್ಯೂಸ್ ನಾಟೌಟ್: “ನಿನ್ನ ಪತ್ನಿಗೆ ಕರ್ನಾಟಕದಲ್ಲಿ ಸರಿಯಾಗಿ ಬಟ್ಟೆ ಧರಿಸುವಂತೆ ಹೇಳು. ಇಲ್ಲದಿದ್ದರೆ ಆಕೆಯ ಮುಖಕ್ಕೆ ಆ್ಯಸಿಡ್‌ ಎರಚುತ್ತೇನೆ’ ಎಂದು ಮಹಿಳೆಯೊಬ್ಬರ ಪತಿಗೆ ಬೆದರಿಸಿ ಸಂದೇಶ ಕಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆದರಿಕೆ ಹಾಕಿದ ಬಳಿಕ ಆ ವ್ಯಕ್ತಿ ಕೆಲಸ ಕಳೆದುಕೊಂಡಿದ್ದಾನೆ. ಖಾಸಗಿ ಸಂಸ್ಥೆಯ ನೌಕರ ನಿಖಿತ್‌ ಶೆಟ್ಟಿ ಕೆಲಸ ಕಳೆದುಕೊಂಡ ಯುವಕ ಎಂದು ಗುರುತಿಸಲಾಗಿದೆ.
ಇಟಿಯೋಸ್‌ ಡಿಜಿಟಲ್‌ ಸರ್ವಿಸ್‌ ಎಂಬ ಸಂಸ್ಥೆಯ ನೌಕರನಾಗಿದ್ದ ನಿಖಿತ್‌ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಮಹಿಳೆಯೊಬ್ಬರ ಪತಿ ಶಹಬಾಜ್‌ ಅನ್ಸರ್‌ಗೆ “ಕರ್ನಾಟಕದಲ್ಲಿ ನಿನ್ನ ಪತ್ನಿಗೆ ಸರಿಯಾಗಿ ಬಟ್ಟೆ ಹಾಕುವುದಕ್ಕೆ ಹೇಳು. ಇಲ್ಲದಿದ್ದರೆ ಆ್ಯಸಿಡ್‌ ಹಾಕುವುದಾಗಿ’ ಬೆದರಿಸಿ ಸಂದೇಶ ಬರೆದು ಟ್ಯಾಗ್ ಮಾಡಿದ್ದಾನೆ.

ಇದರಿಂದ ಕೆರಳಿದ ಮಹಿಳೆಯ ಪತಿ ಶಹಬಾಜ್‌ ಅನ್ಸರ್‌ ತನ್ನ ಪತ್ನಿಯ ಕುರಿತು ಮೆಸೇಜ್‌ ಕಳುಹಿಸಿದ ಸ್ಕ್ರೀನ್‌ಶಾಟ್‌ ಅನ್ನು ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ತನ್ನ ಪತ್ನಿ ಬಟ್ಟೆ ಧರಿಸುವ ಬಗ್ಗೆ ನಿರ್ಧರಿಸುವ ಈ ವ್ಯಕ್ತಿ ಯಾರು, ಬೆದರಿಕೆ ಸಂದೇಶ ಕಳುಹಿಸಿದವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಡಿಜಿಪಿ ಅಲೋಕ್‌ ಮೋಹನ್‌ ಅವರಿಗೆ ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ.

ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ನಿಂದನೆ ಸಂದೇಶಗಳು ಬರುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಚಿಂತಿಸಿರಲಿಲ್ಲ. ಆದರೆ, ನಿಖಿತ್‌ ಶೆಟ್ಟಿ ಎಂಬಾತ ಕಳುಹಿಸಿ ಸಂದೇಶ ಭಯಹುಟ್ಟಿಸುವಂತಿದೆ ಎಂದು ಆಕೆಯ ಪತಿ ಪತ್ರಕರ್ತರಾಗಿರುವ ಶಹಬಾಜ್‌ ಆತಂಕ ವ್ಯಕ್ತಪಡಿಸಿದ್ದಾರೆ.

ನಿಖಿತ್‌ ಶೆಟ್ಟಿ ಸಂದೇಶದ ಕುರಿತು ಶಹಬಾಜ್‌ ಟ್ವೀಟ್‌ ಮಾಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನು ನನ್ನ ಪತ್ನಿಗೆ ಆ್ಯಸಿಡ್‌ ದಾಳಿಯ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಎಟಿಯೋಸ್‌ ಡಿಜಿಟಲ್‌ ಸೇವೆಯಲ್ಲಿ ಕೆಲಸ ಮಾಡುತ್ತಾನೆ. ಈ ಸಂಸ್ಥೆಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಶಹಬಾಜ್‌ ಟ್ವೀಟ್‌ ಮಾಡಿದ ಹಿನ್ನೆಲೆಯಲ್ಲಿ ನಿಖಿತ್‌ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿಗೂ ಈ ಸಂಗತಿ ಗೊತ್ತಾಗಿ ಆತನನ್ನು ಕೆಲಸದಿಂದ ವಜಾಗೊಳಿಸಿ, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

Click

https://newsnotout.com/2024/10/rathan-tata-benjamin-netanyahu-kannada-news/
https://newsnotout.com/2024/10/baby-the-inspector-adopted-the-baby-found-in-the-bush/
https://newsnotout.com/2024/10/sanjay-datt-in-kateel-durgaparameshwari-temple/
https://newsnotout.com/2024/10/vijayadashami-kannada-news-bjp-leader-distributed-sowrd-to-girls/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/
See also  ಕೊಕ್ಕಡ : ಮರದ ಕೊಂಬೆ ಬಿದ್ದು ಮಹಿಳೆ ಮೃತ್ಯು!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget