ಕ್ರೈಂರಾಜ್ಯವೈರಲ್ ನ್ಯೂಸ್

ಎಷ್ಟೇ ಹೇಳಿದ್ರೂ ಆಕೆಯ ಸಹವಾಸ ಬಿಡದ ಪತಿ..! ಪತಿಯ ಕಾಲು ಮುರಿಯಲು 5 ಲಕ್ಷ ರೂ.ಗೆ ಸುಪಾರಿ ನೀಡಿದ ಪತ್ನಿ..!

ನ್ಯೂಸ್ ನಾಟೌಟ್: ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ ನಗರದ ಅತ್ತರ ಕಂಪೌಡ್ ಬಳಿ ನಡೆದಿದೆ.

ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿಯಾಗಿದ್ದು, ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ್,ಮನೋಹರ, ಸುನೀಲ್ ರನ್ನ ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ ಕೆಲ ತಿಂಗಳಿನಿಂದ ಮತ್ತೊಬ್ಬ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ, ಹೀಗಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಎಂದು ಪತ್ನಿ ಸ್ಕೆಚ್‌ ಹಾಕಿದ್ದಾಳೆ.

ಪತಿಯ ಎರಡೂ ಕಾಲುಗಳನ್ನ ಮುರಿಯಲು 5 ಲಕ್ಷಕ್ಕೆ ಪತ್ನಿ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಆದರೆ, ವೆಂಕಟೇಶ್‌ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನ ಕಲಬುರಗಿಯ ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.

Related posts

ಮಹಾನಗರ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿ ಲಕ್ಷಾಂತರ ರೂ. ವಂಚನೆ..! 5 ಮಂದಿ ಅರೆಸ್ಟ್..!

ಶಿಕ್ಷಕಿಯರಿಗೆ ಇನ್ನು ಮುಂದೆ ವಸ್ತ್ರಸಂಹಿತೆ ಕಡ್ಡಾಯ..! ಈ ಬಗ್ಗೆ ಉನ್ನತ ಅಧಿಕಾರಿ ಹೇಳಿದ್ದೇನು..?

ಮತಗಟ್ಟೆಗೆ ಕೇಸರಿ ಶಾಲು ಧರಿಸಿ ಬಂದಿದ್ದವರನ್ನು ವಾಪಸ್ ಕಳಿಸಿದ ಪೊಲೀಸ್, ಹಲವು ಗಣ್ಯರಿಂದ ಮತದಾನ