ಕರಾವಳಿ

ಮೊಬೈಲ್ ಚಾರ್ಜರ್ ಎರಡೇ ಬಣ್ಣದಲ್ಲಿ ಯಾಕೆ ಇರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ…

ನ್ಯೂಸ್ ನಾಟೌಟ್: ಸ್ಮಾರ್ಟ್ ಫೋನ್‌ಗಳು ಈಗ ಎಲ್ಲರ ಅಗತ್ಯ ಸಾಧನವಾಗಿದೆ. ಇವುಗಳು ಹೇಗೆ ಅಗತ್ಯವೋ ಅದೇ ರೀತಿ ಬ್ಯಾಟರಿ ಬ್ಯಾಕಪ್​ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಬಣ್ಣಗಳಲ್ಲಿ ಸ್ಮಾರ್ಟ್​​ಫೋನ್​ಗಳಿವೆ. ಇನ್ನು ಒಂದೇ ಸ್ಮಾರ್ಟ್​​ಫೋನ್​ಗಳು ವಿವಿಧ ರೀತಿಯ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಆದರೆ ಈ ಸ್ಮಾರ್ಟ್​ಫೋನ್​ಗಳ ಜತೆ ಬರುವ ಚಾರ್ಜರ್​ಗಳು ಮಾತ್ರ ಕೇವಲ ಎರಡು ಮಾದರಿಯಲ್ಲಿ ಮಾತ್ರ ಇರುತ್ತದೆ. ಹೌದು, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಇರುತ್ತದೆ.

ಇದಕ್ಕೊಂದು ಬಲವಾದ ಕಾರಣವಿದೆ. ಯಾವುದೇ ಒಂದು ಉತ್ಪನ್ನ ಅಥವಾ ಕೆಲಸವನ್ನು ಮಾಡಬೇಕಾದರೆ ಅದರ ಹಿಂದೆ ಏನಾದರು ಒಂದು ಕಾರಣಗಳು ಇದ್ದೇ ಇರುತ್ತದೆ. ಇದೀಗ ಸ್ಮಾರ್ಟ್​​ಫೋನ್​ಗಳ ಚಾರ್ಜರ್​ಗಳು ಕಪ್ಪು ಮತ್ತು ಬಿಳಿ ಬಣ್ಣದಲ್ಲಿರಲು ಕಾರಣ ಇಲ್ಲಿದೆ ನೋಡಿ. ಇತರೆ ಬಣ್ಣಗಳಲ್ಲಿ ಚಾರ್ಜರ್ ಗಳನ್ನು ತಯಾರಿಸದಿರಲು ಅದರ ಬಾಳ್ವಿಕೆ ಮತ್ತು ವೆಚ್ಚವೇ ಮುಖ್ಯ ಕಾರಣವಾಗಿದೆ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್ ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ.

ಕಳೆದ ಕೆಲವು ವರ್ಷಗಳಿಂದ ಕೆಲ ಮೊಬೈಲ್​ ಕಂಪೆನಿಗಳು ತನ್ನ ಬ್ರಾಂಡ್​ನ ಮೊಬೈಲ್ ಜೊತೆ ಬಿಳಿ ಬಣ್ಣದ ಚಾರ್ಜರ್ ನೀಡುತ್ತಿವೆ. ಬಿಳಿ ಚಾರ್ಜರ್​​ ನೀಡಲು ವಿಶೇಷವಾಗಿ ಮೂರು ಕಾರಣಗಳಿವೆ. ಮೊದಲನೆಯದಾಗಿ, ಬಿಳಿ ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣ ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಚಾರ್ಜರ್ ಕಡಿಮೆ ಬಿಸಿಯಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಕಪ್ಪು ಬಣ್ಣದ ಚಾರ್ಜರ್ ಗಳ ಸಮಸ್ಯೆಯೆಂದರೆ ರಾತ್ರಿ ಕತ್ತಲೆಯಲ್ಲಿ ಅವುಗಳನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಅದೇ ಬಿಳಿ ಬಣ್ಣದ ಚಾರ್ಜರ್ ಕತ್ತಲೆಯಲ್ಲಿಯೂ ಸುಲಭವಾಗಿ ನೋಡಬಹುದಾಗಿದೆ. ಇನ್ನು ಬಿಳಿ ಬಣ್ಣವು ಸೌಮ್ಯತೆಯ ಸಂಕೇತವಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ. ಅದಕ್ಕಾಗಿಯೇ ಈಗ ಕಂಪೆನಿಗಳು ಹೆಚ್ಚಾಗಿ ಬಿಳಿ ಬಣ್ಣದ ಚಾರ್ಜರ್​ಗಳನ್ನೇ ನೀಡುತ್ತಿದೆ.

Related posts

ಕರಾವಳಿಯಲ್ಲಿ ಅಬ್ಬರಿಸಲಿದ್ದಾನೆ ವರುಣ,ಹವಾಮಾನ ಇಲಾಖೆ ವರದಿಯಲ್ಲೇನಿದೆ?

ಸುಳ್ಯ:ಕೆ.ವಿ.ಜಿ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಅಭಿನವ- 2024’,ಕಾರ್ಯಕ್ರಮದ ವಿಶೇಷತೆಗಳೇನು?ಇಲ್ಲಿದೆ ವರದಿ..

ಸುಳ್ಯ: ಮಹಿಳೆಯರು ಮಕ್ಕಳಿದ್ದ ಶಿಫ್ಟ್ ಕಾರಿಗೆ ಗುದ್ದಿ ಪರಾರಿ! ಹಿಟ್ ಆ್ಯಂಡ್ ರನ್ ಮಾಡಿದ ಕಾರಿನವ ಸಿಕ್ಕಿಬಿದ್ದಿದ್ದೆಲ್ಲಿ..?