ವೈರಲ್ ನ್ಯೂಸ್

2011ರ ವಿಶ್ವಕಪ್​ ಗೆದ್ದ ರಾತ್ರಿಯೇ ಧೋನಿ ಹೆರ್​ಕಟ್ ಮಾಡಿಸಿದ್ದು ಏಕೆ ಅನ್ನೋ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ..! ಧೋನಿಯ ಹೆರ್​ಕಟ್ ಹಿಂದಿದ್ದಾರೆ ಆ ದೇವರು..!

ನ್ಯೂಸ್ ನಾಟೌಟ್: 2011ರ ಏಕದಿನ ವಿಶ್ವಕಪ್​ ಗೆದ್ದ ಇತಿಹಾಸ ಇಂದಿಗೂ ನಮ್ಮೆಲ್ಲರ ಕಣ್ಣ ಮುಂದಿದೆ. ಅಂದು ಆ ರಾತ್ರಿಯೇ ಧೋನಿ ಗೆಲುವಿನ ಖುಷಿಯಲ್ಲಿ ಹೆರ್​ಕಟ್ ಮಾಡಿಸಿದ್ದರು. ಇದು ಏಕೆ ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇಂದಿನ ತನಕ ಹಾಗೆಯೇ ಉಳಿದಿತ್ತು. ಈ ಪ್ರಶ್ನೆಗೆ ಇಂದಿಗೂ ಹಲವರಿಗೆ ಉತ್ತರ ಗೊತ್ತಿಲ್ಲ. ಅವತ್ತಿನ ರಾತ್ರಿ ನಡೆದಿದ್ದೇನು ಅನ್ನೋದರ ಬಗೆಗಿನ ಕೌತುಕದ ವಿಚಾರ ಇಲ್ಲಿದೆ ನೋಡಿ.

2011ರ ಏಕದಿನ ವಿಶ್ವಕಪ್​ ಗೆಲುವು ಕೋಟ್ಯಂತರ ಭಾರತೀಯರ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿತ್ತು. ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವ ಕಪ್ ಕೀರಿಟಕ್ಕೆ ಮುತ್ತಿಟ್ಟಿತ್ತು. ಆ ಕ್ಷಣವನ್ನ ಮರೆಯಲು ಸಾಧ್ಯವೇ ಇಲ್ಲ. ಆ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಧೋನಿ ಹೆಡ್​ ಶೇವ್​ ಮಾಡಿಸಿಕೊಂಡು ಎಲ್ಲರಿಗೂ ಸರ್​ಪ್ರೈಸ್​ ಶಾಕ್​ ಕೊಟ್ಟಿದ್ದರು. ಇಂದಿಗೂ ಹಲವರಿಗೆ ಇದರ ಹಿಂದಿರುವ ವಿಚಾರವೇ ಅರ್ಥ ಆಗಿಲ್ಲ.

ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಿದ್ದು ಏಪ್ರಿಲ್​ 2 ತಡರಾತ್ರಿ. ಆಟಗಾರರು ಹೋಟೆಲ್​​ಗೆ ತೆರಳಿ ಅಲ್ಲಿ ಸಂಭ್ರಮಾರಣೆ ಮುಗಿಸಿದರು. ಮಲಗುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತಂತೆ. ಬೆಳಗ್ಗೆ ಎದ್ದಾಗ ಆಟಗಾರರಿಗೆಲ್ಲಾ ಧೋನಿ ಸರ್​​ಪ್ರೈಸ್​ ಶಾಕ್​ ಕೊಟ್ಟಿದ್ರು. ರಾತ್ರಿ ಮಲಗುವಾಗ ಇದ್ದ ಧೋನಿ ತಲೆ ಕೂದಲು ಬೆಳಗಾಗುವಷ್ಟರಲ್ಲಿ ಮಾಯವಾಗಿತ್ತು. ಇದನ್ನ ಕಂಡ ಅಭಿಮಾನಿಗಳೂ ಕೂಡ ಬೆರಗಾಗಿದ್ರು. ಇದ್ರ ಹಿಂದಿನ ಕಾರಣ ಧೋನಿಯ ದೇವರ ಮೇಲಿನ ಭಕ್ತಿ.

ಹೌದು, ವಿಶ್ವಕಪ್​ಗೂ ಮುನ್ನ ತಾವು ತುಂಬಾ ನಂಬ್ತಿದ್ದ ರಾಂಚಿಯ ದೇವರಲ್ಲಿ ಧೋನಿ ಮುಡಿಕೊಡುವ ಹರಕೆ ಮಾಡಿಕೊಂಡಿದ್ರು. ಹೀಗಾಗಿ, ವಿಶ್ವಕಪ್​ ಗೆದ್ದ ದಿನ ರಾತ್ರಿ, ಧೋನಿ ತಾವು ಹರಕೆ ಮಾಡಿಕೊಂಡಿದ್ದ ದೇವಸ್ಥಾನದ ಪೂಜಾರಿಗಳು ತಿಳಿಸಿದಂತೆ, ರಾತ್ರಿ 2.45ರಿಂದ 3ಗಂಟೆಯ ಅವಧಿಯಲ್ಲಿ ಮುಡಿ ತೆಗೆಸಿಕೊಂಡಿದ್ರು. ಇಷ್ಟೇ ಅಲ್ಲದೆ, ಆ ಕೂದಲನ್ನ ಧೋನಿ, ತಿರುಪತಿ ತಿಮ್ಮಪ್ಪನಿಗೂ ಕೂದಲು ಕಳುಹಿಸಿಕೊಟ್ಟಿದರು.

Related posts

ಪೊಲೀಸ್ ಮತ್ತು ಆರೋಪಿಯ ನಡುವೆ ಬೀದಿ ಜಗಳ..! ಇಲ್ಲಿದೆ ವಿಡಿಯೋ

ಪೂನಂ ಪಾಂಡೆ ವಿರುದ್ಧ ಕೇಸ್​ ದಾಖಲು..! ದೂರು ದಾಖಲಿಸಿದವರ್ಯಾರು..?

ರಾಷ್ಟ್ರಗೀತೆ ಹಾಡುವಾಗ 10ನೇ ತರಗತಿ ವಿದ್ಯಾರ್ಥಿನಿ ಆಕಸ್ಮಿಕ ಸಾವು! ದಿಢೀರನೇ ಕುಸಿದುಬಿದ್ದ ವಿದ್ಯಾರ್ಥಿನಿಗೇನಾಗಿತ್ತು?