ಕರಾವಳಿ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾ ಡಿಕ್ಕಿ,ನಾಲ್ಕು ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತ್ಯು

235

ನ್ಯೂಸ್ ನಾಟೌಟ್ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಟೊ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಉತ್ತರ ಕನ್ನಡದ ಅಂಕೋಲಾದ ಬಾವಿಕೇರಿಯಲ್ಲಿ ಈ ಘಟನೆ ನಡೆದಿದೆ.ಅಂಕೋಲಾದ ಶೋಭಾ ಗೋಪಾಲ ನಾಯಕ(28) ಮೃತ ಮಹಿಳೆ.

ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಈಕೆ  ತನ್ನ ಮನೆ ಮುಂದಿನ ಡಾಮರು ರಸ್ತೆ ಪಕ್ಕದ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.  ವೇಗವಾಗಿ ಬಂದ ಆಟೊ ರಿಕ್ಷಾ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.ಇದರಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಿಂದ ಚಾಲಕ ಪರಾರಿಯಾಗಿದ್ದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಜೂನ್ ‌3, 4ರಂದು ಮಂಗಳೂರಿನಲ್ಲಿ ಘಮಘಮಿಸಲಿದೆ ಹಲಸು ಪರಿಮಳ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget