ಕರಾವಳಿಕೊಡಗುಕ್ರೈಂ

ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕತ್ತಿಗೆ ಸಿಲುಕಿ ಬಾಲಕಿ ದಾರುಣ ಸಾವು

ನ್ಯೂಸ್ ನಾಟೌಟ್: ಜೋಕಾಲಿ ಆಡುತ್ತಿದ್ದ ಬಾಲಕಿಯೊಬ್ಬಳ ಕತ್ತಿಗೆ ಸೀರೆ ಸುತ್ತಿಕೊಂಡು ದಾರುಣವಾಗಿ ಸಾವಿಗೀಡಾಗಿರುವ ಮನಕಲಕುವ ಘಟನೆ ಕಾರ್ಕಳದಿಂದ ವರದಿಯಾಗಿದೆ. ನಿಟ್ಟೆ ಗ್ರಾಮದ ಕೆಮ್ಮಣ್ಣ ಅಂತೊಟ್ಟು ಎಂಬಲ್ಲಿ ನಡೆದಿದೆ.

ಲಕ್ಷ್ಮಣ ಪೂಜಾರಿ ಅನ್ನುವವರ ಮಗಳು ಮಾನ್ವಿ (೯) ಮೃತಪಟ್ಟ ಬಾಲಕಿಯಾಗಿದ್ದಾಳೆ.26 ರಂದು ಸಂಜೆ ಮನೆ ಪರಿಸರದಲ್ಲಿ ಸಂಬಂಧಿಕ ಉದಯ ಪೂಜಾರಿ ಎಂಬವರ ಮನೆಯ ಬಳಿ ದೀಕ್ಷಾ ಎಂಬ ಬಾಲಕಿ ಸೀರೆಯನ್ನು ಕಟ್ಟಿ ಜೋಕಾಲಿ ಆಡುತ್ತಿದ್ದಾಗ ಆಕಸ್ಮಾತ್ ಆಗಿ ಸೀರೆ ಕತ್ತಿಗೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ನಡೆಯಿತು. ಆದರೆ ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ವರದಿ ನೀಡಿದ್ದಾರೆ.

Related posts

ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಎಸಿ ಸ್ಫೋಟ..! 6 ಮಂದಿಗೆ ಗಾಯ , ಓರ್ವ ಗಂಭೀರ

ಎರಡು ದಿನದ ಮಗುವನ್ನು ಕಾಫಿ ತೋಟದಲ್ಲಿ ಬಿಟ್ಟುಹೋದ ತಾಯಿ..! ಮುಂದೇನಾಯ್ತು..?

ಪೊಲೀಸರ ಎದುರೇ ಶಾಸಕನ ಕಪಾಳಕ್ಕೆ ಬಾರಿಸಿದ ವಕೀಲ..! ಇಲ್ಲಿದೆ ವೈರಲ್ ವಿಡಿಯೋ