ವಿಡಿಯೋವೈರಲ್ ನ್ಯೂಸ್

ಆಸ್ಪತ್ರೆಯಲ್ಲಿ ವೀಲ್‌ ಚೇರ್‌ ಕೊಡೊಕೆ ನಿರಾಕರಣೆ..! ಮಗನನ್ನು ಸ್ಕೂಟರ್‌ನಲ್ಲಿ 3ನೇ ಮಹಡಿಗೆ ಕರೆದೊಯ್ದ ತಂದೆ! ಇಲ್ಲಿದೆ ವೈರಲ್‌ ವಿಡಿಯೋ

194

ನ್ಯೂಸ್ ನಾಟೌಟ್: ಕಾಲು ಮುರಿದುಕೊಂಡ ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲು ವೀಲ್‌ ಚೇರ್‌ ಸಿಗದ ಕಾರಣ ಮಗುವಿನ ತಂದೆ ಸ್ಕೂಟರ್‌ ಮೇಲೆಯೆ 3ನೇ ಮಹಡಿಗೆ ತನ್ನ ಮಗುವನ್ನು ಕರೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಎಂಬಿಬಿಎಸ್‌ ಆಸ್ಪತ್ರೆಯಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ವಕೀಲ ವೃತ್ತಿಯಲ್ಲಿರುವ ಮನೋಜ್‌ ಜೈನ್‌ ಎಂಬವರು ಕಾಲು ಮುರಿದುಕೊಂಡು ಪ್ಲಾಸ್ಟರ್‌ ಹಾಕಿಸಿಕೊಂಡಿದ್ದ ಮಗನನ್ನು ಚಿಕಿತ್ಸೆಗೆಂದು ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಎಂಬಿಬಿಎಸ್‌ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ವೀಲ್‌ ಚೇರ್‌ ನೀಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಕ್ಕೆ ಮನೋಜ್‌ ಜೈನ್‌ ಕೋಪಗೊಂಡು ತಾವು ತೆಗೆದುಕೊಂಡು ಬಂದಿದ್ದ ಸ್ಕೂಟರ್‌ ಮೂಲಕವೇ ನೇರವಾಗಿ ಆಸ್ಪತ್ರೆ ಒಳಗೆ ನುಗ್ಗಿ 3ನೇ ಮಹಡಿಗೆ ಹೋಗಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.

See also  ತುಂಡು ಲುಂಗಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಎಸ್.ಐ..! ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget