ಜೀವನಶೈಲಿ

ನಿಮ್ಮ ಫೋನ್ ಆನ್ ಲೈನ್ ಇಲ್ಲದಿದ್ದರೂ ಮತ್ತೊಂದು ಫೋನ್ ನಲ್ಲಿ ವಾಟ್ಸ್ ಅಪ್‌ ಆನ್‌ ಮಾಡಬಹುದು..!

ಬೆಂಗಳೂರು: ವಾಟ್ಸ್ ಅಪ್ ಬಳಸುತ್ತಿರುವ ಫೋನ್ ನಲ್ಲಿ ಇಂಟರ್ ನೆಟ್ ಆಫ್ ಆಗಿದ್ದರೂ, ಮತ್ತೊಂದು ಫೋನ್ ಅಥವಾ ಡಿವೈಸ್ ನಲ್ಲಿ ನಿಮ್ಮ ವಾಟ್ಸ್ ಅಪ್‌ ಇನ್ನು ಕೆಲಸ ಮಾಡಲಿದೆ. ಮಲ್ಟಿ ಡಿವೈಸ್ ಸಪೋರ್ಟ್ ಎನ್ನುವ ಫೀಚರ್ ಅನ್ನು ವಾಟ್ಸ್ಅಪ್ ಪರಿಚಯಿಸುತ್ತಿದ್ದು, ಬಳಕೆದಾರರಿಗೆ ಹೊಸ ಅಪ್ ಡೇಟ್ ದೊರೆಯುತ್ತಿದೆ.

ಈವರೆಗೆ ವಾಟ್ಸ್ ಅಪ್‌ ವೆಬ್ ಆಯ್ಕೆಯ ಮೂಲಕ ಮತ್ತೊಂದು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ವಾಟ್ಸ್ಅಪ್ ಬಳಸಬಹುದಾಗಿತ್ತು. ಆದರೆ ನಿಮ್ಮ ಫೋನ್ ನಲ್ಲಿ ಇಂಟರ್ ನೆಟ್ ಆನ್ ಆಗಿರುವುದು ಮುಖ್ಯವಾಗಿತ್ತು. ಹೊಸ ಅಪ್ ಡೇಟ್ ನಲ್ಲಿ ನಿಮ್ಮ ವಾಟ್ಸ್ಅಪ್ ಖಾತೆ ಇರುವ ಮೂಲ ಫೋನ್ ಆನ್ ಲೈನ್ ಇಲ್ಲದಿದ್ದರೂ, ಸೆಕೆಂಡರಿ ಡಿವೈಸ್ ಮೂಲಕ ಮತ್ತೊಂದು ಫೋನ್ ನಲ್ಲಿ ವಾಟ್ಸ್ ಅಪ್ ಬಳಸಬಹುದಾಗಿದೆ.

ವಾಟ್ಸ್ ಅಪ್ ವೆಬ್ ಮಾದರಿಯಲ್ಲೇ, ಸೆಕೆಂಡರಿ ಡಿವೈಸ್ ಅನ್ನು ನಮ್ಮ ಖಾತೆಗೆ ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಸ ಅಪ್‌ಡೇಟ್‌ನಲ್ಲಿ ವಾಟ್ಸ್ ಅಪ್ ಪರಿಚಯಿಸಿದೆ. ಇದರಿಂದಾಗಿ ಪ್ರೈಮರಿ ಫೋನ್ ಇಂಟರ್‌ನೆಟ್ ಇಲ್ಲದಿದ್ದರೂ, ಅಥವಾ ಸ್ವಿಚ್ ಆಫ್ ಆಗಿದ್ದರೂ, ಮತ್ತೊಂದು ಡಿವೈಸ್ ನಲ್ಲಿ ಲಾಗಿನ್ ಆಗಿದ್ದರೆ, ಅಲ್ಲಿಯೇ ವಾಟ್ಸ್ ಅಪ್ ಬಳಸುವ ಅವಕಾಶ ಜನರಿಗೆ ದೊರೆಯಲಿದೆ. ಹಲವು ಹಂತದ ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಹೊಸ ಅಪ್‌ಡೇಟ್ ಅನ್ನು ಬಳಕೆದಾರರಿಗೆ ವಾಟ್ಸ್ ಅಪ್ ಬಿಡುಗಡೆ ಮಾಡಿದೆ.

Related posts

ಇಂದು ಅಂ.ರಾ. ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ತಡೆಗಟ್ಟುವ ದಿನ, “ನಿಮಗೊಂದು ಕಿವಿಮಾತು.. ಮಾದಕ ವಸ್ತುಗಳಿಂದ ದೂರವಿರಿ”

ಇಂದು ವಿಶ್ವ ಪರಿಸರ ದಿನ:ಮನೆಯಲ್ಲಿಈ ಗಿಡಗಳಿದ್ದರೆ ಶುದ್ಧವಾದ ಗಾಳಿ ಉಸಿರಾಡಬಹುದು!

ಸೈಕಲ್‌ ನಲ್ಲೇ ದೇಶ ಪರ್ಯಟನೆ ಮಾಡಿದ ರೈತ!