ವೈರಲ್ ನ್ಯೂಸ್

Viral: “ಬಾಸ್​, ನಾನು ಗರ್ಭಿಣಿಯಾಗಿದ್ದೇನೆ”, ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ವೈರಲ್‌ ಆಗಿದ್ಯಾಕೆ ಗೊತ್ತಾ?

285

ನ್ಯೂಸ್ ನಾಟೌಟ್: ಜಾಲತಾಣದಲ್ಲಿ ವಿವಿಧ ವಿಚಾರಗಳು ವೈರಲ್ ಆಗಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ಮಾಡಿರುವ ವಾಟ್ಸಾಪ್ ಚಾಟ್‌ ದೇಶ ವಿದೇಶದಲ್ಲಿ ಲಕ್ಷಾಂತರ ನೋಡುಗರನ್ನು ಕಂಡಿದೆ. ಬರೋಬ್ಬರಿ ಮೂರು ಮಿಲಿಯನ್ ಗೂ ಅಧಿಕ ಜನ ನೋಡಿದ್ದಾರೆ. ಮಹಿಳೆ ತನ್ನ ಕಚೇರಿಯ ಮುಖ್ಯಸ್ಥನಿಗೆ ಕಳುಹಿಸಿದ ವಾಟ್ಸಾಪ್‌ ನಲ್ಲಿ ಅಂಥದ್ದೇನಿದೆ ಅನ್ನುವುದು ಕುತೂಹಲ. ಚಾಟ್‌ ವಿವರ ಇಲ್ಲಿದೆ ನೋಡಿ.

ಮಹಿಳಾ ಉದ್ಯೋಗಿ : ಹಾಯ್ ಬಾಸ್​

ಬಾಸ್​ : ಯೆಸ್?​

ಮಹಿಳಾ ಉದ್ಯೋಗಿ : ನಾನು ಗರ್ಭಿಣಿ

ಬಾಸ್​ : ??

ಮಹಿಳಾ ಉದ್ಯೋಗಿ : ಆದ್ದರಿಂದ…

ಮಹಿಳಾ ಉದ್ಯೋಗಿ : ನನಗೆ ಕೆಲ ದಿನಗಳ ಮಟ್ಟಿಗೆ ರಜೆ ಬೇಕಿತ್ತು.

ಮಹಿಳಾ ಉದ್ಯೋಗಿ : ಈ ವಿಷಯವನ್ನು ನನ್ನ ಬಾಯ್​ಫ್ರೆಂಡ್ ಜೊತೆ ಚರ್ಚಿಸುವುದಕ್ಕೆ.

ಮಹಿಳಾ ಉದ್ಯೋಗಿ : ದಯವಿಟ್ಟು ನನ್ನ ರಜಾಮನವಿಯನ್ನು ಸ್ವೀಕರಿಸಿ.

ಬಾಸ್​ : ದಯವಿಟ್ಟು ಈ ವಿಷಯವನ್ನು ಮೊದಲು ನನ್ನ ಹೆಂಡತಿಯೊಂದಿಗೆ ಚರ್ಚಿಸಿ!! ಆರಂಭದ ಎರಡು ಮೆಸೇಜ್​ಗಳನ್ನು ಆಕೆ ಓದಿದ್ದಾಳೆ. ಮತ್ತೆ ಯಾಕೆ ನೀವು ಒಂದೇ ಮೆಸೇಜ್​ನಲ್ಲಿ ಈ ಎಲ್ಲಾ ವಿಷಯಗಳನ್ನು ಟೈಪ್ ಮಾಡುವುದಿಲ್ಲ?

https://twitter.com/crazyinteract/status/1665759548328534018?s=20

ಈ ಟ್ವೀಟ್​ ಅನ್ನು ಈತನಕ ಸುಮಾರು 3.9 ಮಿಲಿಯನ್​ ಜನರು ಓದಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 8,000 ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದಾರೆ.

See also  ಖಾಸಗಿ ಸಂಸ್ಥೆಯ ತರಬೇತಿ ವಿಮಾನ ಪತನ..! ಮುಂದೇನಾಯ್ತು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget