ನ್ಯೂಸ್ ನಾಟೌಟ್: ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಹಿರಿಯರು ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಪಾಠವನ್ನು ಮಾಡುತ್ತಿದ್ದರು. ಬೆಳಗೆದ್ದ ತಕ್ಷಣ ಕಲ್ಪವೃಕ್ಷ ತೆಂಗಿನ ಮರವನ್ನು ನೋಡಬೇಕು, ಅಂಗೈಯನ್ನು ನೋಡಿ ಮಂತ್ರ ಪಠಿಸ ಬೇಕು , ಇಲ್ಲವೇ ದೇವರ ಫೋಟೋವನ್ನಾದರೂ ನೋಡಬೇಕೆಂದು ಹೇಳುತ್ತಿದ್ದರು. ಆದರೆ ಮೊಬೈಲ್ ಬಂದ ಮೇಲಂತು ದಿನ ಬೆಳಗಾದರೇ ಸಾಕು,ಈಗಿನ ಮಕ್ಕಳು ಸೋಶಿಯಲ್ ಮೀಡಿಯಾದತ್ತ ಕಣ್ಣಾಡಿಸುತ್ತಲೇ ಇರುತ್ತಾರೆ.ಅದರಲ್ಲೂ ವಾಟ್ಸಾಪ್ ನ್ನಂತೂ ಪಕ್ಕಾ ನೋಡೇ ನೋಡ್ತಾರೆ.
ಇನ್ನೂ ಕೆಲವರಿಗೆ ವಾಟ್ಸಾಪ್ ಸ್ಟೇಟಸ್ ಹಾಕೋ ಅಭ್ಯಾಸ ಇರುತ್ತೆ.ಇದೀಗ ಅಂಥವರಿಗೆ ಗುಡ್ನ್ಯೂಸ್ ಅಂತಲೇ ಹೇಳಬಹುದು.ಹೌದು, ಮೆಸೇಜ್ ಮತ್ತು ಕಾಲ್ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್. ಇದು ಜಗತ್ತಿನ ಪ್ರತಿಯೊಂದು ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಇದ್ದೇ ಇರುತ್ತೆ.
ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು.ಆದ್ರೆ ಮೆಟಾ ಕಂಪನಿ ಸ್ಟೇಟಸ್ ಹೊಸ ಫೀಚರ್ ಅನ್ನು ಬಿಟ್ಟಿದೆ. ಅದುವೇ ಮ್ಯೂಸಿಕ್.ಮೆಟಾ ಕಂಪನಿಯೂ ಜನಕ್ಕೆ ಮತ್ತಷ್ಟೂ ಹತ್ತಿರವಾಗಿದ್ದು, ಈ ಹಿಂದೆ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಮಾತ್ರ ಫೋಟೋಗೆ ಹಾಡನ್ನು ಹಾಕಬಹುದಾಗಿತ್ತು. ಆದರೆ ಇದೀಗ ಮೆಟಾ ಕಂಪನಿ ವಾಟ್ಸಾಪ್ನಲ್ಲೂ ಈ ಫೀಚರ್ ತಂದಿದೆ. ಅಂದರೆ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಫೋಟೋ ಅಥವಾ ವಿಡಿಯೋ ಜೊತೆಗೆ ನಿಮಗೆ ಇಷ್ಟ ಇರುವ ಸಾಂಗ್ ಅನ್ನು ಹಾಕಬಹುದಾಗಿದೆ.