ರಾಜಕೀಯವೈರಲ್ ನ್ಯೂಸ್

ಬಿಜೆಪಿ ವಾಟ್ಸಪ್‌ ವಿವಿಯಲ್ಲಿ ಬೆಳೆದು ಬಂದಿದ್ದು ! ಭಾರತದ ಭವಿಷ್ಯ ಬದಲಾಯಿಸಿ ಅಂದ್ರೆ, ಹೆಸರು ಬದಲಾಯಿಸಲು ಹೊರಟಿದ್ದಾರೆ! ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ!

174

ನ್ಯೂಸ್ ನಾಟೌಟ್: ಭಾರತದ‌ ಭವಿಷ್ಯ ಬದಲಾವಣೆ ಮಾಡಿ ಅಂದರೆ ಭಾರತದ ಹೆಸರು ಬದಲಾವಣೆ ಮಾಡಲು ಬಿಜೆಪಿ ಹೊರಟಿದೆ ಅಂತ ಬಿಜೆಪಿ‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ʻಇಂಡಿಯಾʼ (INDIA) ಹೆಸರು ಭಾರತ್ (ರಿಪಬ್ಲಿಕ್‌ ಆಫ್‌ ಭಾರತ್‌) (Republic Of Bharat) ಎಂದು ಬದಲಾವಣೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಇದೊಂದು ವಾಟ್ಸಪ್‌ ವಿವಿಯಲ್ಲಿ ಬೆಳೆದು ಬಂದಿದ್ದು. ಇವರು ಇತಿಹಾಸ ತಿಳಿದುಕೊಂಡು ಬಂದಿಲ್ಲ. ಇಂಡಿಯಾ ಹೇಗೆ ಬಂತು ಅಂತ ಮೊದಲು ಇವರು ಇತಿಹಾಸ ತಿಳಿದುಕೊಳ್ಳಲಿ ಅಂತ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯವರು (BJP Leaders) ಮೊದಲು ರಸ್ತೆಗಳ ಹೆಸರು ಚೇಂಜ್ ಮಾಡ್ತಿದ್ರು, ಈಗ ದೇಶದ ಹೆಸರು ಚೇಂಜ್ ಮಾಡ್ತಿದ್ದಾರೆ. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ. ಹಸಿವಿನಿಂದ ಎಷ್ಟು ಜ‌ನ ಸಾಯ್ತಿದ್ದಾರೆ? ಅದನ್ನ ಬದಲಾವಣೆ ಮಾಡಿ. ನಿಮ್ಮ ಅವದಿಯಲ್ಲಿ ಕೋಟ್ಯಂತರ ಜನರು ಹಸಿವಿನಿಂದ ಸಾಯ್ತಿದ್ದಾರೆ. ಇದಕ್ಕೆ ಮೊದಲು ಪರಿಹಾರ ಕೊಡಿ ಎಂದು ಆಗ್ರಹಿಸಿದ್ದಾರೆ.

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಅಂತ ಹೇಳ್ತಿದ್ರು ಈಗ ಅದೆಲ್ಲ ಏನಾಯ್ತು? ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಇವುಗಳ‌ ಬಗ್ಗೆ ಮೊದಲು ಮಾತಾಡಿ. ಇವೆಲ್ಲದರ ಕುರಿತು ಮೊದಲು‌ ಶ್ವೇತ ಪತ್ರ ಹೊರಡಿಸಲಿ ಅಂತ ಸವಾಲು ಹಾಕಿದ್ದಾರೆ. ‌

See also  ಪರೀಕ್ಷೆಯಲ್ಲಿ ನಕಲು ಮಾಡಿದಳೆಂದು ಪೋಷಕರನ್ನು ಕರೆಸಿದ ಶಿಕ್ಷಕರು..! ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget