ಅಟೋಮೊಬೈಲ್

ನಿಮ್ಮ ಮೊಬೈಲ್ ನಂಬರ್ ಗೆ ನೀವು ರೀಚಾರ್ಜ್ ಮಾಡದಿದ್ದರೆ ಏನಾಗುತ್ತೆ..? ಕಳೆದುಕೊಳ್ಳುವ ಮುನ್ನ ಈ ವರದಿ ಓದಿ

224

ನ್ಯೂಸ್ ನಾಟೌಟ್: ತುಂಬಾ ಜನ ನಾಲ್ಕೈದು ಮೊಬೈಲ್ ಸಂಖ್ಯೆಗಳನ್ನು ಹೊಂದಿರುತ್ತಾರೆ. ಕೆಲವರು ಡೈಲಿ ಯೂಸೇಜ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡುತ್ತಾರೆ. ಆದರೆ ಅಗತ್ಯ ಇರುವ ನಂಬರ್ ಆಗಿದ್ದರೂ ರೀಚಾರ್ಜ್ ಮಾಡುವುದಕ್ಕೆ ಮರೆತು ಬಿಡುತ್ತಾರೆ. ಇದರಿಂದ ಅವರ ಮೊಬೈಲ್ ಸಂಖ್ಯೆಯೇ ರದ್ದಾಗುತ್ತದೆ ಅಥವಾ ಇನ್ನೊಬ್ಬರಿಗೆ ಆ ಸಂಖ್ಯೆಯನ್ನು ವರ್ಗಾಯಿಸಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ..? ನಿಮ್ಮ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಹೇಗೆ..? ಅನ್ನುವುದರ ಕುರಿತ ವರದಿ ಇಲ್ಲಿದೆ ಓದಿ..

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕರೆನ್ಸಿ ರೇಟ್ ಗಗನಕ್ಕೇರಿದೆ. ಒಂದಷ್ಟು ಕಂಪನಿಗಳು ಗ್ರಾಹಕರಿಗೆ ಆಫರ್ ನೀಡುತ್ತಿವೆ. ಎಲ್ಲಿ ಕಡಿಮೆಗೆ ಸಿಗುತ್ತದೋ ಜನ ಆ ಕಡೆ ಹೋಗುತ್ತಾರೆ. ಹಾಗೆಯೇ ಈ ಮೊಬೈಲ್ ರೀಚಾರ್ಜ್ ನಲ್ಲೂ ಕೂಡ, ಹಾಗೆ ಕಡಿಮೆ ದರದ ಕಂಪನಿ ಕಡೆಗೆ ನಾವು ಮನಸ್ಸು ಮಾಡಿದಾಗ ನಮ್ಮ ಇನ್ನೊಂದು ನಂಬರ್ ಗೆ ರೀಚಾರ್ಜ್ ಮಾಡದೆ ತಿಂಗಳಾನುಗಟ್ಟಲೆ ಹಾಗೆಯೇ ಬಾಕಿ ಉಳಿದಿರುತ್ತದೆ. ಇದರಿಂದ ನಮ್ಮ ಮೊಬೈಲ್ ಸಂಖ್ಯೆ ಡೆಡ್ ಆಗಿರುತ್ತೆ ಅಥವಾ ಕಂಪನಿ ಬ್ಲಾಕ್ ಮಾಡುತ್ತದೆ. ಬಳಿಕ ಆ ನಂಬರ್ ಅನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆ.

ಟೆಲಿಕಾಂ ನಿಯಮದಂತೆ ನಿರ್ಧಿಷ್ಟ ಅವಧಿಯ ಒಳಗೆ ಒಂದು ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುತ್ತದೆ. ಆದರೆ, ಹೆಚ್ಚಿನವರು ಮೊಬೈಲ್ ಸಂಖ್ಯೆ ರದ್ದಾಗುವುದನ್ನು ಇಷ್ಟಪಡಲ್ಲ. ವೈಯಕ್ತಿಕ ಕಾರಣಗಳು ಆ ನಂಬರ್ ನ ಹಿಂದೆ ಅನೇಕ ಇರುತ್ತದೆ.

ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಮೊದಲು ಕಂಪನಿಗಳು ಹಲವಾರು ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಮೊದಲನೆಯದಾಗಿ, ನೀವು 60 ದಿನಗಳವರೆಗೆ ಸಿಮ್ ಅನ್ನು ರಿಚಾರ್ಜ್ ಮಾಡದಿದ್ದಾಗ ಅದು ನಿಷ್ಕ್ರಿಯಗೊಳ್ಳುತ್ತದೆ. ಇದಾದ ಬಳಿಕ ಪುನಃ ರಿಚಾರ್ಜ್ ಮಾಡಲೆಂದು 6 ರಿಂದ 9 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಂದರ್ಭ ನೀವು ಆ ಸಂಖ್ಯೆಯನ್ನು ರೀಚಾರ್ಜ್ ಮಾಡಿ ಮತ್ತೆ ಸಕ್ರಿಯಗೊಳಿಸಬಹುದು.

ನಂತರವೂ ನೀವು ಸಿಮ್ ಬಳಸದಿದ್ದರೆ, ಕಂಪನಿಯು ಹಲವಾರು ಎಚ್ಚರಿಕೆಗಳನ್ನು ನೀಡುತ್ತದೆ. ಅಂತಿಮವಾಗಿ ಕಂಪನಿಯು ಸಿಮ್ ಬ್ಲಾಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಂತರ ಕೆಲವೇ ತಿಂಗಳುಗಳಲ್ಲಿ ಈ ಸಿಮ್ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಸಿಮ್ ಅನ್ನು ವರ್ಗಾಯಿಸಲು ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

See also  ಶೀಘ್ರದಲ್ಲೇ ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ ಸ್ವಿಫ್ಟ್ ಕಾರ್..! ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಕಾರಿನಲ್ಲಿ ಏನೇನಿದೆ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget