ದೇಶ-ಪ್ರಪಂಚರಾಜಕೀಯ

ಸಲ್ಲು ಜತೆ ಭರ್ಜರಿ ಡಾನ್ಸ್‌ ಮಾಡಿದ ಪಶ್ಚಿಮ ಬಂಗಾಳದ ಸಿ.ಎಂ..!ಮಮತಾ ಬ್ಯಾನರ್ಜಿ ನೃತ್ಯಕ್ಕೆ ಸಲ್ಲು ಫ್ಯಾನ್ಸ್‌ ಫಿದಾ ಆಗಿದ್ದೇಕೆ?ವಿಡಿಯೋ ವೀಕ್ಷಿಸಿ ..

ನ್ಯೂಸ್ ನಾಟೌಟ್ : ರಾಜಕಾರಣಿಗಳು ಅಂದ್ರೆ ಸಾಮಾನ್ಯವಾಗಿ ಥಟ್ ಅಂತ ನೆನಪಾಗೋದು ಅವರ ಗಂಭೀರತೆ.. ಸ್ಟೇಜ್ ಮೇಲೆ ನಿಂತು ಕೊಂಡು ಭಾಷಣ ಮಾಡೋದು… ಜನರ ಸಮಸ್ಯೆಗಳನ್ನು ಆಲಿಸೋದು ಹಾಗೂ ಅವರಿಗೆ ಸ್ಪಂದಿಸೋದು..ಹೀಗೇ ನೂರೆಂಟು ಕೆಲಸಗಳಿರುತ್ತವೆ. ಆದರೆ ರಾಜಕಾರಣಿಗಳು ಡ್ಯಾನ್ಸ್ ಮಾಡೋದು ಭಾರಿ ಅಪರೂಪ..ಇದೀಗ ಅಂತಹ ಸಾಲಿಗೆ ಪಶ್ಚಿಮ ಬಳಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೇರಿಕೊಳ್ಳುತ್ತಾರೆ.​ಕಾರ್ಯಕ್ರಮವೊಂದರಲ್ಲಿ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು,ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 29ನೇ ಆವೃತ್ತಿಯು ಡಿಸೆಂಬರ್​ 5ರಿಂದ ಪ್ರಾರಂಭಗೊಂಡಿದೆ. ಇದು 12ರವರೆಗೆ ನಡೆಯಲಿಕ್ಕಿದೆ.ನಿನ್ನೆ ಉದ್ಘಾಟನಾ ಸಮಾರಂಭ ನಡೆದಿದ್ದು,ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಡ್ಯಾನ್ಸ್​ ಮಾಡಿದ್ದಾರೆ.ಬಾಲಿವುಡ್​ ನಟ ಸಲ್ಮಾನ್​, ಅನಿಲ್​ ಕಪೂರ್​, ನಟಿ ಸೋನಾಕ್ಷಿ ಸಿನ್ಹಾ, ನಿರ್ದೇಶಕ ಮಹೇಶ್​ ಭಟ್​, ಶತ್ರುಗ್ನ ಸಿನ್ಹಾ ಜೊತೆಗೆ ಡ್ಯಾನ್ಸ್​ ಮಾಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

KIFF2023 ವೇದಿಕೆ ಮೇಲೆ ಗಣ್ಯರೆಲ್ಲರು ನೆರೆದಿದ್ದರು ಈ ವೇಳೆ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಥೀಮ್​ ಸಾಂಗ್​ ಬಿಡುಗಡೆ ಮಾಡಲಾಯಿತು. ಈ ಥೀಮ್​ ಸಾಂಗ್​ಗೆ ಸಲ್ಮಾನ್​ ಖಾನ್​ ಹಾಗು ಇತರ ಗಣ್ಯರ ಜೊತೆಗೆ ಮಮತಾ ಬ್ಯಾನರ್ಜಿ ಅವರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಫಿಲ್ಮ್ ಸ್ಟಾರ್‌ಗಳ ಜತೆ ಮಮತಾ ಬ್ಯಾನರ್ಜಿ ಕೂಡ ನೃತ್ಯ ಮಾಡಿದ್ದಾರೆ.

ಇನ್ನು ಈ ಅದ್ದೂರಿ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಅವರು ವೇದಿಕೆಯನ್ನು ಉದ್ದೇಶಿಸಿ ಮಾತನಾಡಲು ಹೊರಟಾಗ ಅಭಿಮಾನಿಗಳ ಚಪ್ಪಾಳೆ ಮತ್ತು ಶಿಳ್ಳೆ ಜೋರಾಗಿ ಕೇಳಿಸಿದೆ. ಅದಕ್ಕೆ ಅವರು ಹೀಗೆ ‘ಸೌಂಡ್​ ಮಾಡುತ್ತಾ ಇರಿ, ನನಗೆ ಮಾತನಾಡಲು ಅವಕಾಶ ಕೊಡಬೇಡಿ’ ಎಂದು ತಮಾಷೆ ಮಾಡಿದ್ದಾರೆ.ಒಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರ ಡಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್‌ ಮಾಡಿದೆ.

Related posts

ವಾಹನ ಚಾಲಕರಿಗೂ ಚಾಲನೆ ಅವಧಿ ನಿಗದಿಯಾಗಲಿ: ಸಚಿವ ಗಡ್ಕರಿ

ಲೋಕಸಭಾ ಸಮರ:ಸುಳ್ಯ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಎನ್ . ಜಯಪ್ರಕಾಶ್ ರೈ ನೇಮಕ,ಸುಳ್ಯ ಬ್ಲಾಕ್ ವೀಕ್ಷಕರಾಗಿ ಸರ್ವೋತ್ತಮ ಗೌಡ ಹಾಗೂ ಕಡಬ ಬ್ಲಾಕ್ ವೀಕ್ಷಕರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆ

ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆಗೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು..! ಆರೋಪಿಗಳೆಂದು 4 ಭಾರತೀಯರನ್ನು ಬಂಧಿಸಿದ ಕೆನಡಾ