Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

150 ವರ್ಷಗಳಷ್ಟು ಹಳೇಯ ಬಾವಿ ಸ್ವಚ್ಛಗೊಳಿಸುವಾಗ ದಿಢೀರ್ ಹೊರ ಬಂದ ವಿಷಾನಿಲ..! 8 ಮಂದಿ ಸಾವು..!

652

ನ್ಯೂಸ್ ನಾಟೌಟ್: 150 ವರ್ಷಗಳಷ್ಟು ಹಳೇಯ ಬಾವಿ ಸ್ವಚ್ಛಗೊಳಿಸುವಾಗ ಸೋರಿಕೆಯಾದ ವಿಷಾನಿಲ ಸೇವನೆಯಿಂದ ಕನಿಷ್ಠ 8 ಜನರು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಮಧ್ಯಪ್ರದೇಶದ ಕೊಂಡಾವತ್ ​ನಲ್ಲಿ ನಡೆದಿದೆ.

ಗಂಗೌರ್ ಮಾತಾ ವಿಶೇಷ ಆಚರಣೆಗಾಗಿ ಛೈಗಾಂವ್ ಮಖಾನ್ ಪ್ರದೇಶದಲ್ಲಿನ ಬಾವಿ ಸ್ವಚ್ಛ ಮಾಡುವಾಗ ಈ ದುರಂತ ಸಂಭವಿಸಿದೆ.

ಆರಂಭದಲ್ಲಿ ಇಬ್ಬರು ಬಾವಿಯೊಳಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅವರು ಉಸಿರುಗಟ್ಟಿದಾಗ ರಕ್ಷಣೆಗೆ ಇನ್ನೂ ಆರು ಮಂದಿ ಬಾವಿಯೊಳಗೆ ಇಳಿದಿದ್ದಾರೆ. ಅವರೂ ಕೂಡ ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಘಟನೆಯಿಂದ ಸ್ಥಳದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್​ ಮತ್ತು ಎಸ್ ​ಡಿಇಆರ್ ​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಾವಿಯ ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಬಾವಿಯಲ್ಲಿನ ವಿಷಕಾರಿ ಅನಿಲದಿಂದಾಗಿ ರಕ್ಷಣಾ ಸಿಬ್ಬಂದಿಯೂ ಕೂಡ ಆರಂಭದಲ್ಲಿ ತೊಂದರೆ ಅನುಭವಿಸಿದರು. ಆಕ್ಸಿಜನ್​ ಮಾಸ್ಕ್​ ನೆರವಿನಿಂದ ಬಾವಿಯೊಳಗೆ ಇಳಿದು, ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿಡೀಸೆಲ್​​ ದರ ಏರಿಕೆ ವಿರೋಧಿಸಿ ಲಾರಿ ಮುಷ್ಕರಕ್ಕೆ ತಯಾರಿ..! ಅಗತ್ಯ ವಸ್ತುಗಳ ಸಾಗಾಟ ದರ ಹೆಚ್ಚಳ ಸಾಧ್ಯತೆ..!

See also  ಮುಖ್ಯಮಂತ್ರಿಗಳ ಪದಕ ಪಡೆಯಬೇಕಿದ್ದ ಇನ್ಸ್‌ ಪೆಕ್ಟರ್‌ ಬಂಧನ ಭೀತಿಯಿಂದ ಪರಾರಿ..! ಇಬ್ಬರು ಕಾನ್ಸ್ ​ಟೇಬಲ್ ​ಗಳು ಸೇರಿ ಐವರು ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget