ಕ್ರೈಂದೇಶ-ಪ್ರಪಂಚ

ಪತ್ನಿ ನೀಡಿದ ಕಾಫಿ ಕಂಡು ಪತಿ ಶಾಕ್ ..!,ಸಿಸಿಟಿವಿ ನೋಡಿದ ಗಂಡನಿಗೆ ಗೊತ್ತಾಯ್ತು ಅಸಲಿ ಸತ್ಯ,ಏನದು?

ನ್ಯೂಸ್ ನಾಟೌಟ್ :ಗಂಡನನ್ನು ಕೆಲವು ಮಹಿಳೆಯರು ದೇವರಂತೆ ಕಾಣುತ್ತಾರೆ.ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಸ್ನೇಹಿತ.ತನ್ನ ಮಕ್ಕಳ ಮೇಲೆ ಸಾವಿರ ಕನಸಿಟ್ಟು ಪೋಷಿಸುವ ತಂದೆ.ಹೀಗೆ ಆತನಿಗೆ ಒಂಚೂರು ನೋವಾದರೂ ಸಹಿಸಿಕೊಳ್ಳದ ಹೆಂಡತಿಯರು ಈಗಿನ ಕಾಲದಲ್ಲಿಯೂ ಇದ್ದಾರೆ.ಆದರೆ ಈ ಒಂದು ಘಟನೆ ಅದಕ್ಕೆ ತದ್ವಿರುದ್ಧವಾಗಿದೆ.ಅದೇನೆಂದು ಮುಂದೆ ಓದಿ..

 ಈ ಘಟನೆಯಲ್ಲಿ ಪತಿಗೆ ಪತ್ನಿಗೆ ಕಾಫಿಯನ್ನೇನೋ ರೆಡಿ ಮಾಡಿದ್ದಾಳೆ.ಆದರೆ ಗಂಡನಿಗೆ ಕಾಫಿ ವಾಸನೆ ಬರೋದಕ್ಕೆ ಶುರುವಾಗುತ್ತೆ.ಇದೇನು ಈ ರೀತಿಯ ಕೆಟ್ಟ ವಾಸನೆ ಬರುತ್ತಿದೆಯಲ್ವ ಎಂದು ನೋಡಿದವನಿಗೆ ಶಾಕ್ ಆಗಿದೆ. ಹೆಂಡತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ.

ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಪತ್ನಿಯು ಯುಎಸ್​ ಏರ್​ಪೋರ್ಸ್​ ಉದ್ಯೋಗಿಯಾಗಿರುವ ಪತಿ ಜಾನ್ಸನ್​ರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದಿದೆ.ಆಕೆ ಕಾಫಿಯಲ್ಲಿ ವಿಷ ಬೆರೆಸಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪತ್ನಿ ಮೆಲೊಡಿ ಫೆಲಿಕ್ಯಾನೋ ಎಂಬಾಕೆಯನ್ನು ಯುಎಸ್​ ಪೊಲೀಸರು ಬಂಧಿಸಿದ್ದಾರೆ. ಪತ್ನಿ ನೀಡಿದ ಕಾಫಿಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದರಿಂದ ಸಂಭಾವ್ಯ ದುರಂತ ತಪ್ಪಿದೆ.

ಕಳೆದ ಮಾರ್ಚ್​ನಿಂದಲೂ ಕಾಫಿಯಲ್ಲಿ ಸ್ಲೋ ಪಾಯಿಸನ್​ ಹಾಕಲು ಪತ್ನಿ ಆರಂಭಿಸಿದ್ದಾಳೆ ಎನ್ನುವ ಮಾಹಿತಿಯಿದೆ.ಪತ್ನಿಯ ವರ್ತನೆಯ ಮೇಲೆ ಅನುಮಾನಗೊಂಡ ಜಾನ್ಸನ್​ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ಹೀಗೆ ದಿನಗಳು ಉರುಳಿದ್ದವು. ಇತ್ತೀಚೆಗೆ ನೀಡಿದ ಕಾಫಿಯಲ್ಲಿ ಅತಿ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಜಾನ್ಸನ್​, ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಾಫಿಗೆ ವಿಷ ಬೆರೆಸುತ್ತಿರುವುದು ಜಾನ್ಸನ್​ ಗಮನಕ್ಕೆ ಬಂದಿದೆ.

ಸಿಸಿಟಿಯ ದೃಶ್ಯಾವಳಿಯನ್ನು ಪೊಲೀಸರಿಗೆ ತೋರಿಸಿದ ನಂತರ ಪೊಲೀಸರು ತನಿಖೆ ನಡೆಸಿ, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಜಾನ್ಸನ್ ಅವರು ತನ್ನ ಕಾಫಿಯಲ್ಲಿ ಹೆಚ್ಚಿನ ಮಟ್ಟದ ಕ್ಲೋರಿನ್ ಅನ್ನು ಪತ್ತೆಹಚ್ಚಲು ಕೆಲ ಪರೀಕ್ಷಾ ವಿಧಾನಗಳನ್ನು ಬಳಸಿದ್ದು, ಅದನ್ನು ನ್ಯಾಯಾಲಯಕ್ಕೂ ತಿಳಿಸಿದ್ದಾರೆ. ಅಲ್ಲದೆ, ಕೆಲ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯಿದೆ.

ತನ್ನ ಹೆಂಡತಿ ತನ್ನನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ . ಈ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಳು ಎಂದು ಜಾನ್ಸನ್​, ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿದ ನಂತರ ಆಕೆಯನ್ನು ಬಂಧಿಸಲಾಗಿದೆ. ದಂಪತಿಗೆ ಒಂದು ಮಗುವಿದೆ ಆದರೂ ಈ ರೀತಿಯ ದುರ್ವತನೆ ಮಗುವಿನ ಮೇಲೆ ಪರಿಣಾಮ ಬೀರಿದೆ. ಇಬ್ಬರೂ ವಿಚ್ಛೇದನ ಪಡೆಯಲು ಮುಂದಾಗಿದ್ದರು ಎಂದು ವರದಿ ತಿಳಿದಿದೆ.

Related posts

ಮಿತ್ತಮಜಲು: ಬೈಕ್ ಮತ್ತು ಪಿಕಪ್ ನಡುವೆ ಅಪಘಾತ, ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ

ಕರ್ತವ್ಯ ನಿರತ ವೈದ್ಯರ ಮೇಲೆ ಮುಸ್ಲಿಂ ಮಹಿಳೆಯಿಂದ ಹಲ್ಲೆ..! ಹೊರ ರೋಗಿ ವಿಭಾಗ ಬಂದ್ ಮಾಡಿ ಜಿಲ್ಲಾಸ್ಪತ್ರೆ ವೈದರು ಮತ್ತು ಸಿಬ್ಬಂದಿಯಿಂದ ಪ್ರತಿಭಟನೆ..! ಇಲ್ಲಿದೆ ವಿಡಿಯೋ

ಶಾಲಾ ವಿದ್ಯಾರ್ಥಿನಿಯ ಫೋಟೋ ಡೀಪ್​ ಫೇಕ್​ ಮಾಡಿ ಜಾಲತಾಣದಲ್ಲಿ ಹಂಚಿಕೊಂಡ ಹುಡುಗರು..! 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಇನ್ಸ್ಟಾಗ್ರಾಮ್ ಗ್ರೂಪ್ ರಚನೆ..!