Uncategorized

ನಾಳೆಯಿಂದಲೇ ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು: ಆರ್ ಅಶೋಕ

ಬೆಂಗಳೂರು: ಆಂತರಿಕ ಒತ್ತಡ ಮತ್ತು ವಾಣಿಜ್ಯೋದ್ಯಮ ಸಮುದಾಯದ ಬೇಡಿಕೆಗೆ ತಲೆಬಾಗಿರುವ ಸರ್ಕಾರ ವಾರಾಂತ್ಯ ಕರ್ಫ್ಯೂವನ್ನು ಕೈಬಿಡಲು ನಿರ್ಧರಿಸಿದೆ. ಆದರೆ, ರಾತ್ರಿ ಕರ್ಫ್ಯೂ ಸೇರಿ ಉಳಿದ ಎಲ್ಲಾ ನಿಯಮಗಳು ಈಗಿರುವಂತೆ ಮುಂದುವರೆಯಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ತಜ್ಞರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

Related posts

ಮಡಿಕೇರಿ: ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ,ಇಬ್ಬರು ಅರೆಸ್ಟ್

ಶ್ರದ್ಧಾ ಹತ್ಯೆ ಮಾದರಿಯಲ್ಲೇ ಅಪ್ಪನನ್ನು 30 ಪೀಸ್‌ ಮಾಡಿದ ಮಗ..!

ಬೆಂಕಿ ಹೊತ್ತಿಕೊಂಡಿರುವಾಗಲೇ ರಸ್ತೆ ಮೇಲೆ ವೇಗವಾಗಿ ಚಲಿಸಿದ ಕಾರು..! ದಿಕ್ಕಾಪಾಲಾಗಿ ಓಡಿದ ಜನ..! ಇಲ್ಲಿದೆ ವೈರಲ್ ವಿಡಿಯೋ