ನ್ಯೂಸ್ ನಾಟೌಟ್: ರಾಷ್ಟ್ರಪತಿ ಭವನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ವಿವಾಹವೊಂದು ನಡೆಯಲಿದೆ. ಹೌದು,ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಪೂನಂ ಗುಪ್ತಾ ಅವರು ರಾಷ್ಟ್ರಪತಿ ಭವನದ ಮದರ್ ಥೆರೇಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಸಿಆರ್‌ಪಿಎಫ್ನ ಅಧಿಕಾರಿ ಅವನೀಶ್ ಕುಮಾರ್ ಅವರನ್ನು ವರಿಸಲಿದ್ದಾರೆ.ಪೂನಂ ಗುಪ್ತಾ ಅವರು ರಾಷ್ಟ್ರಪತಿ ಅವರ ವೈಯಕ್ತಿಕ ಭದ್ರತಾಧಿಕಾರಿ (ಪಿಎಸ್‌ಒ) ಆಗಿದ್ದಾರೆ.ಅವನೀಶ್ ಅವರು ಕೇಂದ್ರ ಮೀಸಲು ಪೊಲೀಸ್ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದಾರೆ. ಸದ್ಯ ಅವರು ಜಮ್ಮುಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಣಿತದಲ್ಲಿ ಪದವಿ ಪಡೆದಿರುವ ಪೂನಂ ಗ್ವಾಲಿಯರ್‌ನ ಜೀವಾಜಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇನ್‌ಸ್ಟಾಗ್ರಾಮದಲ್ಲೂ ಸಾಕಷ್ಟು ಕ್ರಿಯಾಶೀಲರಾಗಿರುವ ಇವರು ರಾಷ್ಟ್ರಪತಿಗಳ ಭದ್ರತಾ ಅಧಿಕಾರಿ. ಸಿಆರ್‌ಪಿಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದು,ಯುಪಿಎಸ್‌ಸಿ ಪರೀಕ್ಷೆಯಲ್ಲಿ 8ನೇ ರ್‍ಯಾಂಕ್ ಗಳಿಸಿದ್ದು ಮಾತ್ರವಲ್ಲದೇ ರಾಷ್ಟ್ರಪತಿಗಳ ಭದ್ರತಾ ಅಧಿಕಾರಿ ಯಾಗುವ ಮೊದಲು ಬಿಹಾರದ ನಕ್ಸಲ್‌ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರು.
ರಾಷ್ಟ್ರಪತಿ ಭವನದಲ್ಲಿ ಮದುವೆಯಾಗಲು ಕಾರಣ,ಪೂನಂ ಗುಪ್ತಾ ಅವರ ನಡವಳಿಕೆ ಮತ್ತು ಸೇವೆ. ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೂನಂ ಸೇವೆ ಭಾರೀ ಮೆಚ್ಚುಗೆಯಾಗಿದ್ದು, ಇದೇ ಕಾರಣಕ್ಕೆ ರಾಷ್ಟ್ರಪತಿ ಭವನದಲ್ಲಿ ವಿವಾಹಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.