ಕರಾವಳಿ

ಮದುವೆ ಮಂಟಪದಲ್ಲೇ ಲಿಪ್ ಟು ಲಿಪ್ ಚುಂಬನ, ನೆರೆದಿದ್ದವರಿಗೆ ಭಾರಿ ಮುಜುಗರ..!

728

ಬೆಂಗಳೂರು: ವಿದೇಶಗಳಲ್ಲಿ ಮದುವೆಯಾದ ಜೋಡಿ ಮದುವೆ ಮಂಟಪದಲ್ಲೇ ಲಿಪ್ ಟು ಲಿಪ್ ಚುಂಬಿಸುವುದು ಕಾಮನ್‌. ಆದರೆ ನಮ್ಮ ದೇಶದಲ್ಲಿ ಅಂತಹ ಸಂಸ್ಕ್ರತಿ ಇಲ್ಲ. ಆದರೆ ಇಲ್ಲೊಂದು ಜೋಡಿ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿ ಮದುವೆ ಮಂಟಪದಲ್ಲೇ ಲಿಪ್ ಟು ಲಿಪ್ ಚುಂಬಿಸಿ ದಾಖಲೆ ನಿರ್ಮಿಸಿದೆ. ಈ ವಿಡಿಯೋ ಈಗ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಏನಿದು ಮುತ್ತಿನ ಕಥೆ?

ಮದುವೆ ಮಂಟಪದಲ್ಲಿ ಫೋಟೋಗಾಗಿ ಚುಂಬಿಸಿಕೊಳ್ಳಿ ಎಂದು ಹೇಳಲಾಯಿತು. ಅಷ್ಟು ಹೇಳಿದ್ದೇ ತಡ ನವದಂಪತಿಗಳು ಲೊಚ..ಲೊಚ ಮುತ್ತಿನ ಮಳೆಗೆರೆದುಕೊಂಡರು. ಫೋಟೋ ತೆಗೆದು ನಿಲ್ಲಿಸಿದರೂ ಇವರ ಮುತ್ತಿನ ಮಳೆ ಸಾರ್ವಜನಿಕವಾಗಿ ಮುಂದುವರಿದೇ ಇತ್ತು. ಇದರಿಂದಾಗಿ ನೆರೆದಿದ್ದವರಿಗೆಲ್ಲ ಮುಜುಗರ ಉಂಟಾಯಿತು. ನೆರೆದಿರುವವರಿಗೂ ಒಂದು ಮುತ್ತು ಈ ರೀತಿ ಪರಿವರ್ತನೆ ಆಗಬಹುದೆಂದು ಊಹಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಮಾತ್ರ ಫುಲ್ ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ

https://www.instagram.com/reel/CXQ1Uz_l0Nm/?utm_source=ig_web_copy_link
See also  ಶಫೀಕ್ ಬೆಳ್ಳಾರೆಗೆ ನ್ಯಾಯಾಂಗ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget