ವೈರಲ್ ನ್ಯೂಸ್

131 ಕೆ.ಜಿ. ತೂಕದ ವೆಡ್ಡಿಂಗ್‌ ಗೌನ್‌ ಕೇಕ್‌ ! : ಫ್ಯಾಷನ್‌ ಶೋ ಬಳಿಕ ಗಣ್ಯರೇ ಕತ್ತರಿಸಿಕೊಂಡು ತಿಂದರು!

437


ನ್ಯೂಸ್ ನಾಟೌಟ್ : ಗೌನ್ ಎಂದಾಕ್ಷಣ ನಿಮ್ಮ ಕಣ್ಣ ಮುಂದೆ ಬರೋದು ಬಿಳಿ ಬಣ್ಣದ ಉದ್ದನೆಯ ಡ್ರೆಸ್.ಮದುವೆ ಇನ್ನಿತ್ಯಾದಿ ಫಂಕ್ಷನ್ ಇದ್ದಾಗ ಇದನ್ನು ಧರಿಸಿಕೊಂಡು ಸಂಭ್ರಮ ಪಡುತ್ತಾರೆ. ಆದರೆ ನಾವಿಲ್ಲಿ ಹೇಳೋದಕ್ಕೆ ಹೊರಟಿರೋದು ಮಾಮೂಲಿ ಗೌನ್ ಅಲ್ಲ , ಇದು ಧರಿಸುವುದರ ಜತೆಗೆ ಇದನ್ನು ತಿನ್ನಲೂ ಬಹುದು.ಅರೆ! ಆಶ್ಚರ್ಯವಾಗುತ್ತಿದೆಯಾ?ಹಾಗಾದ್ರೆ ಬನ್ನಿ ಅದರ ವಿಶೇಷತೆಯೇನು ನೋಡೋಣ…


ಈ ವಿಚಿತ್ರ ಗೌನ್‌ ಅನ್ನು ಕೇವಲ ಮುಟ್ಟುವುದು ಮಾತ್ರವಲ್ಲ, ತಿನ್ನಲೂಬಹುದು! ಅಂಥದ್ದೊಂದು ವಿಶೇಷವಾದ ವೆಡ್ಡಿಂಗ್‌ ಗೌನ್‌ ಕೇಕ್‌ ಇದು.ಅಂದಹಾಗೆ ಸ್ವಿಝರ್ಲೆಂಡ್‌ನಲ್ಲಿ ಸ್ವೀಟಿ ಕೇಕ್ಸ್‌ ಹೆಸರಿನ ಕೇಕ್‌ ಶಾಪ್‌ ಇಟ್ಟುಕೊಂಡಿರುವ ನತಾಶಾ ಕೊಯ್ನೆ ಕಿಮ್ ಫಾಹ್ ಲೀ ಫಾಕ್ಸ್ ಈ ರೀತಿಯ ವಿಶೇಷ ಗೌನ್‌ ಕೇಕ್‌ ಅನ್ನು ತಯಾರಿಸಿದ್ದಾರೆ.

ಹೌದು, ಈ ಗೌನ್ ಕೇಕ್ ತೂಕ ಬರೋಬ್ಬರಿ 131.15 ಕೆ.ಜಿ. ಈ ಗೌನ್‌ ಅನ್ನು ತಾವೇ ತೊಟ್ಟು ಸ್ವಿಸ್ ವರ್ಲ್ಡ್‌ ವೆಡ್ಡಿಂಗ್‌ ಉತ್ಸವದಲ್ಲಿ ಫ್ಯಾಷನ್‌ ಶೋ ನಡೆಸಿದ್ದಾರೆ. ಈ ಕೇಕ್‌ ಕಂಡಿರುವ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ನವರು “ವಿಶ್ವದ ಅತಿ ದೊಡ್ಡ ಧರಿಸಬಹುದಾದ ಕೇಕ್‌” ಎನ್ನುವ ದಾಖಲೆಯನ್ನು ಇದಕ್ಕೆ ಕೊಟ್ಟಿದ್ದಾರೆ.

ವಿಶೇಷವೆಂದರೆ ನತಾಶಾ ಗೌನ್‌ ಕೇಕ್‌ ಧರಿಸಿಕೊಂಡು ಫ್ಯಾಷನ್‌ ಶೋ ಮಾಡಿದ ನಂತರ ಅದನ್ನು ವೇದಿಕೆಯ ಮೇಲೆಯೇ ಗಣ್ಯರು ಕತ್ತರಿಸಿಕೊಂಡು ತಿಂದಿದ್ದಾರಂತೆ, ಆ ಫೋಟೋ ಹಾಗೂ ವಿಡಿಯೊಗಳನ್ನು ಗಿನ್ನಿಸ್‌ ರೆಕಾರ್ಡ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.


ಈ ಕೇಕ್‌ನ ಕೆಳಭಾಗವವನ್ನು ಅಲ್ಯುಮಿನಿಯಂ ಫ್ರೇಮ್‌ ಹಾಗೂ ಎರಡು ಮೆಟಲ್‌ ಬೋಲ್ಟ್‌ಗಳನ್ನು ಬಳಸಿ ಮಾಡಲಾಗಿದೆ. ಹಾಗೆಯೇ ಮೇಲ್ಭಾಗದಲ್ಲಿ ಸಕ್ಕರೆ ಪೇಸ್ಟ್‌ ಮತ್ತು ಫಾಂಡಂಟ್‌ನ ಮಿಶ್ರಣವಿದೆ. ಅಷ್ಟೊಂದು ಭಾರದ ಗೌನ್‌ ಕೇಕ್‌ ಅನ್ನು ಹಾಕಿಕೊಂಡು ನಡೆದಾಡುವುದಕ್ಕೆ ಸಾಧ್ಯವಾಗಬೇಕು ಎನ್ನುವ ಕಾರಣಕ್ಕೆ ಅದಕ್ಕೆ ಚಕ್ರಗಳನ್ನೂ ಅಳವಡಿಸಿದ್ದು ವಿಶೇಷ.ಒಟ್ಟಿನಲ್ಲಿ ಈ ಪ್ರಪಂಚದಲ್ಲಿ ಏನೆನು ವಿಚಿತ್ರಗಳು ನಡಿತ್ತಾವೆಯೋ? ಏನೆನು ವಿಚಿತ್ರಗಳನ್ನು ನೋಡಬೇಕೋ,ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

See also  ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ಕ್ರಿಕೆಟಿಗನ ನಿಶ್ಚಿತಾರ್ಥ..? ಯಾರಿಕೆ ಸಂಸದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget