Latestದೇಶ-ವಿದೇಶರಾಜಕೀಯಸಿನಿಮಾ

‘ನಾವೆಲ್ಲರೂ ದ್ವಿಲಿಂಗಿಗಳು, ಡಿಂಪಲ್‌ ಯಾದವ್‌ ಮೇಲೆ ನನಗೆ ಕ್ರಶ್‌ ಆಗಿದೆ’ ಬಾಲಿವುಡ್‌, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಸ್ವರಾ ಭಾಸ್ಕರ್‌ ಹೇಳಿಕೆ

588

ನ್ಯೂಸ್ ನಾಟೌಟ್: ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ ಅವರ ಮಾತು ಬಾಲಿವುಡ್‌ ಮತ್ತು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.

ರಾಜಕಾರಣಿಯಾಗಿರುವ ತಮ್ಮ ಪತಿ ಫಹಾದ್ ಅಹ್ಮದ್ ಅವರೊಂದಿಗೆ ‘ಪತಿ, ಪತ್ನಿ ಔರ್ ಪಂಗಾ– ಜೋಡಿಯೊ ಕಾ ರಿಯಾಲಿಟಿ ಚೆಕ್‌’ ಎಂಬ ಟಿ.ವಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವರಾ, ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನ ವಿಡಿಯೊ ಈಗ ವ್ಯಾಪಕವಾಗಿ ಹರಿದಾಡುತ್ತಿದೆ.

‘ಪ್ರತಿಯೊಬ್ಬರೂ ವಿರುದ್ಧ ಲಿಂಗದವರ ಕುರಿತು ಆಕರ್ಷಣೆ ಹೊಂದಬೇಕು ಎಂಬುದು ಮನುಷ್ಯರ ಮೇಲೆ ಹೇರಲಾದ ಸಿದ್ಧಾಂತ. ಆದರೆ ಸ್ವಭಾವದಿಂದ ನಾವೆಲ್ಲರೂ ದ್ವಿಲಿಂಗಿಗಳು. ಜನರನ್ನು ಅವರ ಪಾಡಿಗೆ ಅವರಿರುವಂತೆ ಬಿಟ್ಟರೆ ಸಮಾನ ಲಿಂಗದವರತ್ತ ಸಹಜವಾಗಿ ಆಕರ್ಷಣೆ ಹೊಂದುತ್ತಾರೆ. ಆದರೆ ಸಾವಿರಾರು ವರ್ಷಗಲಿಂದ ಅನ್ಯ ಲಿಂಗದವರನ್ನೇ ಒಪ್ಪಿಕೊಳ್ಳುವಂತೆ, ಅವರತ್ತಲೇ ಆಕರ್ಷಣೆ ಹೊಂದುವಂತೆ ಸಿದ್ಧಾಂತ ಹೇರಲಾಗಿದೆ. ಇದರಿಂದಲೇ ಮಾನವ ಜನಾಂಗ ಉಳಿಯಲಿದೆ ಮತ್ತು ಅದುವೇ ನಿಯಮ ಎಂಬುದನ್ನೂ ಹೇಳಿಕೊಂಡು ಬರಲಾಗಿದೆ’ ಎಂದು ಸಂದರ್ಶನದಲ್ಲಿ ಸ್ವರಾ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

https://x.com/SaffronSunanda/status/1957507938966466591

ಈ ಸಂದರ್ಶನ ವಿಡಿಯೊ ಈಗ ವ್ಯಾಪಕವಾಗಿ ಹರಿದಾಡುತ್ತಿದೆ. ‘ಪ್ರತಿಯೊಬ್ಬರೂ ವಿರುದ್ಧ ಲಿಂಗದವರ ಕುರಿತು ಆಕರ್ಷಣೆ ಹೊಂದಬೇಕು ಎಂಬುದು ಮನುಷ್ಯರ ಮೇಲೆ ಹೇರಲಾದ ಸಿದ್ಧಾಂತ. ಆದರೆ ಸ್ವಭಾವದಿಂದ ನಾವೆಲ್ಲರೂ ದ್ವಿಲಿಂಗಿಗಳು. ಜನರನ್ನು ಅವರ ಪಾಡಿಗೆ ಅವರಿರುವಂತೆ ಬಿಟ್ಟರೆ ಸಮಾನ ಲಿಂಗದವರತ್ತ ಸಹಜವಾಗಿ ಆಕರ್ಷಣೆ ಹೊಂದುತ್ತಾರೆ. ಆದರೆ ಸಾವಿರಾರು ವರ್ಷಗಲಿಂದ ಅನ್ಯ ಲಿಂಗದವರನ್ನೇ ಒಪ್ಪಿಕೊಳ್ಳುವಂತೆ, ಅವರತ್ತಲೇ ಆಕರ್ಷಣೆ ಹೊಂದುವಂತೆ ಸಿದ್ಧಾಂತ ಹೇರಲಾಗಿದೆ. ಇದರಿಂದಲೇ ಮಾನವ ಜನಾಂಗ ಉಳಿಯಲಿದೆ ಮತ್ತು ಅದುವೇ ನಿಯಮ ಎಂಬುದನ್ನೂ ಹೇಳಿಕೊಂಡು ಬರಲಾಗಿದೆ’ ಎಂದು ಸಂದರ್ಶನದಲ್ಲಿ ಸ್ವರಾ ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೆ ನಿಮಗೆ ಯಾರ ಮೇಲಾದರೂ ಮೋಹವಾಗಿದೆಯೇ ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ಸ್ವರಾ, ‘ಇತ್ತೀಚೆಗೆ ನಾನು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್‌ ಯಾದವ್‌ ಅವರನ್ನು ಭೇಟಿ ಮಾಡಿದ್ದೆ. ಅವರತ್ತ ಆಕರ್ಷಿತಳಾಗಿದ್ದೇನೆ’ ಎಂದಿದ್ದಾರೆ.

See also  ಎಸ್ಐಟಿ ತನಿಖೆಯಿಂದ ಸತ್ಯ ಹೊರ ಬರಲಿ, ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget