ರಾಜಕೀಯ

ವಯನಾಡಿನಿಂದ ಇಂದು(ಅ.23) ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಕೆ..! ಪ್ರಿಯಾಂಕ ಗಾಂಧಿಗೆ ಇದೇ ಮೊದಲ ಚುನಾವಣೆ..!

ನ್ಯೂಸ್ ನಾಟೌಟ್ :ಕೇರಳದ ವಯನಾಡು ಲೋಕಸಭಾ ಉಪಚುನಾವಣೆ 2024 ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬುಧವಾರ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ರೋಡ್‌ ಶೋ ಮೂಲಕ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಪ್ರಿಯಾಂಕಾ ಗಾಂಧಿಯವರು ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಸಹ ಅವರದ್ದು ಇದೇ ಮೊದಲ ಚುಣಾವಣೆಯಾಗಿದೆ. ಅವರು ಈ ಹಿಂದೆ ಸಂಸದ ರಾಹುಲ್ ಗಾಂಧಿ ಹಾಗೂ ತಾಯಿ ಪ್ರಧಾನಿ ಸೋನಿಯಾ ಗಾಂಧಿ ಪರ ಅಮೇಥಿಯಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಆದರೆ ಅವರು ಚುನಾವಣೆ ನಿಂತಿರಲಿಲ್ಲ.

ಇದೀಗ ಎರಡು ಕಡೆಗೆ ಗೆದ್ದು ಬೀಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ವಯನಾಡು ಟಿಕೆಟ್ ನೀಡಲಾಗಿದೆ. ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಮೊದಲ ಚುನಾವಣೆ ಎದುರಿಸಲು ಭರ್ಜರಿ ತಯಾರಿ ನಡೆಸಿದ್ದಾರೆ.
ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರದಂದು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗಾಂಧಿ ಕುಟುಂಬ ಗುಂಡ್ಲುಪೇಟೆ ಮೂಲಕ ತೆರಳಿದ್ದಾರೆ.

Click

https://newsnotout.com/2024/10/kannada-news-railway-rajasthani-jaipura-october/
https://newsnotout.com/2024/10/bsnl-new-logo-kannada-news-introduced-network-kannada-news/
https://newsnotout.com/2024/10/byelection-kannada-news-congress-opration-viral-news/
https://newsnotout.com/2024/10/mangaluru-kannada-news-surathkal-kannada-news/
https://newsnotout.com/2024/10/mangaluru-kannada-news-helmet-kannada-news-mangaluru/

Related posts

ನನ್ನ ಸಹಿಯನ್ನೇ ತಿರುಚಿ, ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ ಎಂದ ಹೆಚ್.ಡಿ.ಕೆ..! ಒಂದು ದಿನವಾದ್ರೂ ನನ್ನನ್ನು ಜೈಲಿಗೆ ಹಾಕುವ ಪ್ಲ್ಯಾನ್‌ ಎಂದ ಕುಮಾರಸ್ವಾಮಿ..!

ಮೋದಿ ಮತ್ತೆ ಪ್ರಧಾನಿಯಾದ್ರೆ ಇದುವೇ ನನ್ನ ಕೊನೆಯ ಚುನಾವಣೆ ಎಂದ ಮಲ್ಲಿಕಾರ್ಜುನ ಖರ್ಗೆ..! ಆರ್‌ಎಸ್ಎಸ್ ಭಾರತವನ್ನು ಒಡೆದು ಆಳುತ್ತಿದೆ ಎಂದದ್ದೇಕೆ ಖರ್ಗೆ..?

ಪಕ್ಷಾಂತರ ಪರ್ವ ನಡೆಯದಂತೆ ಕೈ ರಣತಂತ್ರ