ವೈರಲ್ ನ್ಯೂಸ್

ವಯನಾಡು ದುರಂತ:16 ಗಂಟೆಯಲ್ಲಿ 190 ಅಡಿ ಉದ್ದದ ಉಕ್ಕಿನ ಸೇತುವೆ ನಿರ್ಮಿಸಿದ ಸೈನಿಕರು..! ಪ್ರವಾಹದ ನಡುವೆಯೂ ಸೈನಿಕರ ಸಾಹಸಕ್ಕೆ ಭಾರೀ ಮೆಚ್ಚುಗೆ

237

ನ್ಯೂಸ್ ನಾಟೌಟ್: ಭೂಕುಸಿತ ಸಂಭವಿಸಿದ್ದ ಚೂರಲ್ಮಲ (Chooralmala) ಮತ್ತು ಮುಂಡಕ್ಕೈಗೆ (Mundakkai) ಸಂರ್ಪಕ್ಕೆ ಕಲ್ಪಿಸುವ ಚಾರಲ್‌ಮಲೈ ನದಿಗೆ ಅಡ್ಡಲಾಗಿ ಕಟ್ಟಲಾದ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ಕೇವಲ 16 ಗಂಟೆಯಲ್ಲಿ ಪೂರ್ಣಗೊಳಿಸಿದೆ.

ಜುಲೈ 31 ರ ರಾತ್ರಿ 9 ಗಂಟೆಗೆ ನಿರ್ಮಾಣಕ್ಕೆ ಕೈ ಹಾಕಿದ ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 01 ರ ಸಂಜೆ 5:30ಕ್ಕೆ ಪೂರ್ಣಗೊಳಿಸಿದರು. ಈ ಸೇತುವೆ 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದೆ. ಎಲ್ಲಾ ರೀತಿಯ ಸವಾಲುಗಳನ್ನು ಮೀರಿ 1 ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ ತಂಡ ಈ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ ಎಂದು ವರದಿ ತಿಳಿಸಿದೆ.

ಈ ಸೇತುವೆ ನಿರ್ಮಾಣವನ್ನು ಮಧ್ಯಾಹ್ನ 12 ಗಂಟೆಯ ಒಳಗಡೆ ಪೂರ್ಣಗೊಳಿಸಲು ಸೇನೆ ಟಾರ್ಗೆಟ್‌ ಹಾಕಿಕೊಂಡಿತ್ತು.ಆದರೆ ಭಾರೀ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದ್ದರೂ ಸೇನೆಯ ಎಂಜಿನಿಯರ್‌ಗಳು ದಾಖಲೆಯ ಅವಧಿಯಲ್ಲಿ ಸೇತುವೆ ನಿರ್ಮಿಸಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಬೈಲಿ ಸೇತುವೆಯು ತಾತ್ಕಾಲಿಕ ಸೇತುವೆಯಾಗಿದ್ದು ಉಕ್ಕಿನ ತುಂಡುಗಳನ್ನು ಜೋಡಿಸಿ ನಿರ್ಮಾಣ ಮಾಡಲಾಗಿದೆ. ಸೇತುವೆ ನಿರ್ಮಾಣಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದಿದೆ. ಜೆಸಿಬಿಗಳು, ಅಂಬುಲೆನ್ಸ್‌ಗಳು, ರಕ್ಷಣಾ ಪಡೆ ಎಲ್ಲರೂ ಈ ಸೇತುವೆಯ ಮೂಲಕವೇ ಸಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/prajwal-revanna-case-fsl-report-handover-to-the-sit-and-confirmed/
See also  ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು..! ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಓರ್ವ ಯುವತಿ ಸಾವು, 8 ಮಂದಿಗೆ ಗಂಭೀರ ಗಾಯ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget