ಕರಾವಳಿಮಂಗಳೂರುವೈರಲ್ ನ್ಯೂಸ್

ಕೇರಳದ ಕೊಚ್ಚಿ ಮಾದರಿಯಲ್ಲಿ ಮಂಗಳೂರಿನಲ್ಲೂ ವಾಟರ್‌ ಮೆಟ್ರೋ, ಭಾರತದ ಎರಡನೇ ಅತಿದೊಡ್ಡ ಜಲ ಸಾರಿಗೆ ಮಂಗಳೂರಿನಲ್ಲಿ..?

ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿಗಳು, ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಬಹು ಸಂಪರ್ಕ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಇದೀಗ ಕೇರಳದ ಕೊಚ್ಚಿ ಮಾದರಿಯಲ್ಲಿ ವಾಟರ್ ಮೆಟ್ರೋ ಯೋಜನೆಗಳನ್ನು ಆರಂಭಿಸಲು ಯೋಜನೆ ರೂಪುಗೊಂಡಿದೆ.

ಕರ್ನಾಟಕ ಮಾರಿಟೈಮ್ ಬೋರ್ಡ್ (KMB) ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಸಮಗ್ರವಾದ ಯೋಜನಾ ವರದಿಯನ್ನು(DPR) ರೂಪಿಸಲು ನಿರ್ಧರಿಸಿದೆ. ಈ ಯೋಜನೆ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್ ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ ಎಂದು ವರದಿ ತಿಳಿಸಿದೆ.
ಈ ಯೋಜನೆ ಜಾರಿಗೆ ಬಂದರೆ ಕೊಚ್ಚಿಯ ನಂತರ ಭಾರತದ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆ ಮಂಗಳೂರಿನಲ್ಲಿ ಇರಲಿದೆ. ಈ ಯೋಜನೆಯು ಪರಿಸರ ಸ್ನೇಹಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್ ದೂರದವರೆಗೆ ಬೋಟ್ ಸಂಚರಿಸಲಿದೆ. ಬಳಿಕ ಬಜಾಲ್‌ ನಿಂದ ಪ್ರಾರಂಭವಾಗಿ ಗುರುಪುರದ ಮರವೂರು ಸೇತುವೆಯವರೆಗೆ ವಿಸ್ತರಿಸಲಿದೆ. ಇದು ಸುಮಾರು 17 ಆಧುನಿಕ ಮೆಟ್ರೋ ನಿಲ್ದಾಣಗಳನ್ನು ಹೊಂದಿರಲಿದೆ. ಯೋಜನೆಯು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಅತ್ಯಾಧುನಿಕ ಎಲೆಕ್ಟ್ರಿಕ್ ಮತ್ತು ಡೀಸೆಲ್ ಬೋಟ್ ಗಳನ್ನು ಬಳಕೆ ಮಾಡಲಾಗುತ್ತದೆ ಎನ್ನಲಾಗಿದೆ.

Click

https://newsnotout.com/2024/11/america-kannada-news-donald-trup-k-viral-news-america/
https://newsnotout.com/2024/11/ritain-bengaluru-kannada-news-viral-news-radhavendra/
https://newsnotout.com/2024/11/sowthadka-mahaganapathi-temple-kannada-news-viral-news/
https://newsnotout.com/2024/11/kannada-news-salman-khan-kannada-news-viral-news-5-crore-karnataka/
https://newsnotout.com/2024/11/court-kannada-news-yash-and-radhika-pandith/
https://newsnotout.com/2024/11/kannada-news-viral-video-uncle-madya-pradesh/

Related posts

ಪಂಜ ಜಾತ್ರೆಗೆ ಭರದ ಸಿದ್ಧತೆ :ಪಂಜ ಪೇಟೆಯಲ್ಲಿ ದೇವಳದ ಕಾಣಿಕೆ ಹುಂಡಿ ಲೋಕಾರ್ಪಣೆ

ನಟ ದರ್ಶನ್ ಫೋಟೋಗೆ ಚಪ್ಪಲಿ, ಬೂಟಿನಿಂದ ಹೊಡೆದು ಪ್ರತಿಭಟನೆ..! ಕರವೇ ಕಾರ್ಯಕರ್ತರ ಆಕ್ರೋಶ

ಬರೋಬ್ಬರಿ 3 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕ,ಅಪರಿಚಿತನಂತೆ ಬಂದು ಹೆತ್ತಮ್ಮನಿಂದ ಮೀನು ಖರೀದಿಸಿದ..!ತಾಯಿ ತನ್ನ ಮಗನೇ ಎಂದು ಕಂಡು ಹಿಡಿದಿದ್ದು ಹೇಗೆ?ವಿಡಿಯೋ ವೈರಲ್..