ಕರಾವಳಿ

ಯೂಟ್ಯೂಬ್ ವೀಕ್ಷಿಸಿ ನೇಣಿಗೆ ಶರಣಾದ 11 ವರ್ಷದ ಬಾಲಕಿ:ಮನೆಯಲ್ಲಿ ಯಾರೂ ಇಲ್ಲದ ವೇಳೆ ನಡೆಯಿತು ದುರಂತ

448

ನ್ಯೂಸ್ ನಾಟೌಟ್ : ಇತ್ತೀಚೆಗೆ ಹೆಚ್ಚಿನ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗುತ್ತಿದ್ದಾರೆ.ಮಾನಸಿಕವಾಗಿ ಕುಗ್ಗಿಸುವ ಅಪಾಯಕಾರಿ ಆಟಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ.ಮೆದುಳಿನ ಮೇಲೆ ಅತ್ಯಂತ ಪರಿಣಾಮ ಬೀರುವ ಮೊಬೈಲನ್ನು ಎಳೆ ಮಕ್ಕಳು ಕೈಯ್ಯಲ್ಲಿ ಹಿಡಿದು ಬಳಕೆ ಮಾಡುತ್ತಿರೋದು ಬೇಸರದ ಸಂಗತಿ.ಉಡುಪಿಯಲ್ಲೊಬ್ಬಳು ಬಾಲಕಿ ಮೊಬೈಲ್ ನಲ್ಲಿ ಯೂಟ್ಯೂಬ್ ವೀಕ್ಷಿಸಿ ನೇಣಿಗೆ ಶರಣಾದ ಘಟನೆ ನಡೆದಿದೆ.ಕೇವಲ ೧೧ ವರ್ಷ ಪ್ರಾಯದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೆಲಸಕ್ಕೆ ತೆರಳಿದ್ದ ಪೋಷಕರು:

ಮನೆಯಲ್ಲಿ ಬಾಲಕಿ ಒಬ್ಬಳನ್ನೇ ಬಿಟ್ಟು ಪೋಷಕರು ಕೆಲಸಕ್ಕೆ ತೆರಳಿದ್ದರು. ಈ ವೇಳೆ ಆಕೆ ಕೈಯ್ಯಲ್ಲಿ ಮೊಬೈಲ್ ಇದ್ದು,ಯೂಟ್ಯೂಬ್ ವೀಕ್ಷಣೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಉಡುಪಿ ಸಮೀಪದ ಬ್ರಹ್ಮಗಿರಿ ಫ್ಲಾಟ್ ಒಂದರಲ್ಲಿ ಈ ಘಟನೆ ನಡೆದಿದ್ದು,ಉಡುಪಿ ಸಾಯಿರಾಧ ಡೆವಲಪರ್ಸ್ ಉದ್ಯೋಗಿ ಪ್ರವೀಣ್ ಶೆಟ್ಟಿ ಎಂಬವರ ಮಗಳು ಮಂಗಳಾದೇವಿ ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ಯೂಟ್ಯೂಬ್ ವೀಕ್ಷಿಸಿ ಮನೆಯ ಬಾತ್ ರೂಮ್ ನತ್ತ ಹೆಜ್ಜೆ ಹಾಕಿ ನೇಣಿಗೆ ಶರಣಾಗಿದ್ದಾಳೆ.

ಶಾಲೆಗೆ ರಜೆ ಇತ್ತು:

ನಿನ್ನೆ ಮಕರ ಸಂಕ್ರಾತಿಯಾದ ಕಾರಣ ಶಾಲೆಗೆ ರಜೆ ಇತ್ತು.ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೆತ್ತವರು ಕೆಲಸಕ್ಕೆ ಹೋಗಿದ್ದರು.ಸಂಜೆ ಬರುವ ವೇಳೆಗೆ ಬಾಲಕಿ ಬಾಗಿಲು ತೆರೆಯದೇ ಇದ್ದಾಗ ಸಂಶಯಗೊಂಡು ಬಾಗಿಲು ಒಡೆದು ಒಳನಡೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.ಬಾಲಕಿ ಕುಂಜಾರುಗಿರಿಯ ಆನಂದ ತೀರ್ಥ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆಕೆ ಉಪಯೋಗಿಸುತ್ತಿದ್ದ ಟ್ಯಾಬ್ ವಶಕ್ಕೆ ತೆಗೆದುಕೊಂಡಿದ್ದಾರೆ.

See also  ಯಾವ ಬ್ಯಾಂಕ್ ಗಳಲ್ಲಿ ನಿಮ್ಮ ಹಣ ಹೆಚ್ಚು ಸುರಕ್ಷಿತ ಗೊತ್ತಾ..? RBI ಬಿಡುಗಡೆ ಮಾಡಿದ ಪಟ್ಟಿಯಲ್ಲೇನಿದೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget